ಮಹಿಳೆಯಿಂದ ಸಮುದಾಯಕ್ಕೆ ಶ್ರೇಷ್ಠ ಸೇವೆ

ಗಂಗಾವತಿ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ  ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದಿಂದ ಹಮ್ಮಿಕೊಂಡ ವಾರ್ಷಿಕ ಸೇವಾ ಶಿಬಿರದಲ್ಲಿ ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷೆ ಸಿ.ಮಹಾಲಕ್ಷ್ಮೀ ಮಾತನಾಡಿದರು. ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್, ಕಾರ್ಯಕ್ರಮಾಧಿಕಾರಿಗಳಾದ ಡಾ. ಸುರೇಶಗೌಡ, ಡಾ. ಬಸಮ್ಮ ಶಿಗ್ಗಾಂವಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಾರ್ಷಿಕ
  • ಸೇವಾ
  • ಶಿಬಿರ
ಗಂಗಾವತಿ: ಸೇವೆಯಲ್ಲಿ ಬದುಕು ಸವೆಸುವ ಮಹಿಳೆಗೆ ಪ್ರಾತಿನಿಧ್ಯದ ಅಗತ್ಯವಿದ್ದು, ಸೇವೆಗೆ ಮತ್ತೊಂದು ಹೆಸರೇ ಮಹಿಳೆ ಎಂದು ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷೆ ಸಿ.ಮಹಾಲಕ್ಷ್ಮೀ ಹೇಳಿದರು.
ನಗರದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದಿಂದ ಹಮ್ಮಿಕೊಂಡ ವಾರ್ಷಿಕ ಸೇವಾ ಶಿಬಿರದಲ್ಲಿ ಯುವತಿಯರು ಮತ್ತು ಸಮಾಜ ಸೇವೆ ವಿಷಯದ ಕುರಿತು ಸೋಮವಾರ ಉಪನ್ಯಾಸ ನೀಡಿದರು.
ಮಹಿಳೆಯ ಬದುಕು ಮಾನವರ ಸೇವೆಯಲ್ಲಿ ಸವೆದು ಹೋಗುತ್ತಿದ್ದು, ತಾಯಿಯಾಗಿ ಮಗನ ಸೇವೆ, ಪತ್ನಿಯಾಗಿ ಗಂಡನ ಸೇವೆ, ಸೊಸೆಯಾಗಿ ಅತ್ತೆ-ಮಾವನ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾಳೆ. ಸೇವೆ ಶಬ್ದಕ್ಕೆ ಮಹಿಳೆ ಪರ್ಯಾಯವಾಗಿದ್ದು, ಮಾನವ ಸಮುದಾಯಕ್ಕೆ ಶ್ರೇಷ್ಠ ಸೇವೆಯಾಗಿದೆ ಎಂದರು.
ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್ ಪ್ರಾಸ್ತಾವಿಕ ಮಾತನಾಡಿ, ಎನ್ನೆಸ್ಸೆಸ್ ಶಿಬಿರಗಳು ಕಲಿಕೆ ಜತೆಗೆ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ನೀಡುತ್ತಿವೆ ಎಂದರು.
ಕಾರ್ಯಕ್ರಮಾಧಿಕಾರಿಗಳಾದ ಡಾ. ಸುರೇಶಗೌಡ, ಡಾ. ಬಸಮ್ಮ ಶಿಗ್ಗಾಂವಿ, ಉಪನ್ಯಾಸಕರಾದ ಪ್ರೊ.ಜಿ.ಬಸವರಾಜ, ಡಾ. ಶಾರದಾ ಪಾಟೀಲ್, ಡಾ. ಜರೀನಾ, ಶಿವಮ್ಮ, ಶಾಂತಮ್ಮ, ವಿಜಯಲಕ್ಷ್ಮೀ, ರಷ್ಮಿ, ಹನುಮಂತ, ಮೆಹಕ್ ಸಾನಿಯಾ, ಶಂಕರನಾಗ್, ಸತೀಶ್, ನಿಮಿಷಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net