ಮನೆ ನಿರ್ಮಾಣಕ್ಕೆ ಅನುದಾನ

ಹೆಬ್ಬಾಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ಮಾಡಿದ ಸಚಿವ ಶಿವರಾಜ ತಂಗಡಗಿ, ಸಿಲಿಂಡರ್ ಸ್ಫೋಟದಿಂದ ಜಖಂಗೊಂಡ ಮನೆಗಳನ್ನು ಭಾನುವಾರ ವೀಕ್ಷಿಸಿದರು. ಡಿಸಿ ಡಾ. ಸುರೇಶ ಇಟ್ನಾಳ, ಎಸ್ಪಿ ಡಾ. ರಾಮ್ ಎಲ್. ಅರಸಿದ್ಧಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಇತರರು ಇದ್ದರು.
ಹೆಬ್ಬಾಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ಮಾಡಿದ ಸಚಿವ ಶಿವರಾಜ ತಂಗಡಗಿ, ಸಿಲಿಂಡರ್ ಸ್ಫೋಟದಿಂದ ಜಖಂಗೊಂಡ ಮನೆಗಳನ್ನು ಭಾನುವಾರ ವೀಕ್ಷಿಸಿದರು. ಡಿಸಿ ಡಾ. ಸುರೇಶ ಇಟ್ನಾಳ, ಎಸ್ಪಿ ಡಾ. ರಾಮ್ ಎಲ್. ಅರಸಿದ್ಧಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಇತರರು ಇದ್ದರು.
Published on

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭರವಸೆ | ಹೆಬ್ಬಾಳದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ

ಗಂಗಾವತಿ: ತಾಲೂಕಿನ ಹೆಬ್ಬಾಳದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮೃತ ಕುಟುಂಬಗಳಿಗೆ ಪರಿಹಾರದ ಜತೆಗೆ ಮನೆ ನಿರ್ಮಾಣಕ್ಕೆ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಹೆಬ್ಬಾಳಕ್ಕೆ ಅಧಿಕಾರಿಗಳೊಂದಿಗೆ ಭಾನುವಾರ ಭೇಟಿ ನೀಡಿ, ಜಖಂಗೊಂಡ ಮನೆಗಳನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಲಿಂಡರ್ ಸ್ಫೋಟದಿಂದ ಎಂಟು ಜನರು ಗಾಯಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮೃತ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರದ ಜತೆಗೆ ಮನೆ ನಿರ್ಮಾಣಕ್ಕೆ ಎರಡು ಲಕ್ಷ ರೂ ಅನುದಾನ ನೀಡಲಾಗುವುದು. ಮಕ್ಕಳಿಗೆ ವಸತಿ ಶಾಲೆಯಲ್ಲಿ ಶಿಕ್ಷಣ ನೀಡಲಾಗುವುದು. ಚಿಕಿತ್ಸೆ ಪಡೆಯುತ್ತಿರುವವರು ಪ್ರಾಣಾಪಾಯದಿಂದ ಪಾರಾಗಿದ್ದು, ಶೀಘ್ರವೇ ಬಳ್ಳಾರಿ ವಿಮ್ಸ್‌ನಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಗ್ಯಾಸ್ ಕಂಪನಿ ವಿಮೆಯಿಂದ ಕುಟುಂಬಗಳಿಗೆ ನೆರವು ದೊರೆಯಲಿದೆ ಎಂದರು. ಡಿಸಿ ಡಾ. ಸುರೇಶ ಇಟ್ನಾಳ, ಎಸ್ಪಿ ಡಾ. ರಾಮ್ ಎಲ್. ಅರಸಿದ್ಧಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಇತರರು ಇದ್ದರು.

ಬಿಜೆಪಿ ಮುಖಂಡರನ್ನು ವಿಚಾರಿಸಿದ ಮಂತ್ರಿ !

ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವದ ನಿಮಿತ್ತ ಗಂಗಾವತಿಗೆ ಆಗಮಿಸಿದ್ದ ಸಚಿವ ಶಿವರಾಜ ತಂಗಡಗಿ, ಜಯನಗರದ ಬಿಜೆಪಿ ಮುಖಂಡ ಜೋಗದ ನಾರಾಯಣಪ್ಪ ನಾಯಕ ಅವರ ನಿವಾಸದಲ್ಲಿ ಬಿಜೆಪಿ ಮುಖಂಡರ ಕುಶಲೋಪರಿ ವಿಚಾರಿಸಿದರಲ್ಲದೆ, ಸಹಭೋಜನ ನಡೆಸಿದರು. ಹಿರಿಯ ಮುಖಂಡ ಎಚ್.ಎಸ್. ಗಿರೇಗೌಡ, ಯುವ ಮುಖಂಡ ಸಾಗರ ಮುನವಳ್ಳಿ ಅವರನ್ನು ನಾನ್‌ವೆಜ್ ತಿನ್ನುವ ವಿಚಾರದಲ್ಲಿ ಛೇಡಿಸಿದರಲ್ಲದೆ, ಹಾಸ್ಯ ಚಟಾಕಿ ಹಾರಿಸಿದರು. ಪಕ್ಷಭೇದ ಮರೆತು ಕೆಲಕಾಲ ನಗೆಗಡಲಲ್ಲಿ ತೇಲಿಸಿದರು. ನಗರಸಭೆ ಮಾಜಿ ಸದಸ್ಯರಾದ ಶಾಮೀದ್ ಮನಿಯಾರ್, ಮನೋಹರಸ್ವಾಮಿ ಹಿರೇಮಠ, ಡಿಸಿಸಿ ಉಪಾಧ್ಯಕ್ಷ ಅಜಗರ್ ಅಲಿ ಸಾಕ್ಷಿಯಾದರು.
ದುರ್ಗಾದೇವಿ ಜಾತ್ರಾಮಹೋತ್ಸವ ನಿಮಿತ್ತ ಗಂಗಾವತಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಜಯನಗರ ಬಿಜೆಪಿ ಮುಖಂಡ ಜೋಗದ ನಾಯಕ ಅವರ ಮನೆಯಲ್ಲಿ ಬಿಜೆಪಿ ಮುಖಂಡರಾದ ಎಚ್.ಎಸ್. ಗಿರೇಗೌಡ, ಸಾಗರ ಮುನವಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net