ಸರ್ಕಾರಿ ಆಸ್ತಿಯನ್ನು ಮಾರುವಂತಿಲ್ಲ

ಹನುಮಸಾಗರದ ಗ್ರಾಪಂನಲ್ಲಿ ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರ ನೇತೃತ್ವದಲ್ಲಿ ಸಭೆ ನಡೆಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ,ತಾಪಂ ಎಡಿಗಳಾದ ನಿಂಗನಗೌಡ ಹಿರೇಹಾಳ, ಮಹಾಂತಗೌಡ ಪೊಲೀಸ್‌ಪಾಟೀಲ್ ಪಿಡಿಒ ನಿಂಗಪ್ಪ ಮೂಲಿಮನಿ ಇತರರಿದ್ದರು.
ಹನುಮಸಾಗರದ ಗ್ರಾಪಂನಲ್ಲಿ ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರ ನೇತೃತ್ವದಲ್ಲಿ ಸಭೆ ನಡೆಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ,ತಾಪಂ ಎಡಿಗಳಾದ ನಿಂಗನಗೌಡ ಹಿರೇಹಾಳ, ಮಹಾಂತಗೌಡ ಪೊಲೀಸ್‌ಪಾಟೀಲ್ ಪಿಡಿಒ ನಿಂಗಪ್ಪ ಮೂಲಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹನುಮಸಾಗರ ಗ್ರಾಪಂ ಕಾರ್ಯಾಲಯಕ್ಕೆ ಭೇಟಿ
  • ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರ ತಾಕೀತು
ಹನುಮಸಾಗರ: ಗ್ರಾಮ ಪಂಚಾಯಿತಿಯ ಎಲ್ಲ ಮಾಹಿತಿಯನ್ನು ನಗರಾಭಿವೃದ್ಧಿ ಇಲಾಖೆಗೆ ಸರಿಯಾಗಿ ಒದಗಿಸಬೇಕು ಎಂದು ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರ ಹೇಳಿದರು.
ಇಲ್ಲಿನ ಗ್ರಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಪೌರಾಡಳಿತ ನಿರ್ದೇಶನದಂತೆ ಗ್ರಾಪಂನ ಪ್ರತಿಯೊಂದು ಮಾಹಿತಿಯನ್ನು ಇಲಾಖೆಗೆ ಒದಗಿಸಬೇಕು ಎಂದು ಸೂಚಿಸಿದ ಅವರು, ಸರ್ಕಾರಿ ಆಸ್ತಿಯನ್ನು ಮಾರುವುದಾಗಲಿ, ಬರೆದುಕೊಡುವುದಾಗಲಿ ಮಾಡುವಂತಿಲ್ಲ ಎಂದು ತಾಕೀತು ಮಾಡಿದರು.
ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ತಾಪಂ ಎಡಿಗಳಾದ ನಿಂಗನಗೌಡ ಹಿರೇಹಾಳ, ಮಹಾಂತಗೌಡ ಪೊಲೀಸ್‌ಪಾಟೀಲ್ ಪಿಡಿಒ ನಿಂಗಪ್ಪ ಮೂಲಿಮನಿ, ಗ್ರಾಪಂ ಸದಸ್ಯರು, ಕಾರ್ಯದರ್ಶಿ ಅಮರೇಶ ಕರಡಿ, ಎಸ್‌ಡಿಎ ವೀರನಗೌಡ ಪಾಟೀಲ್, ಬಿಎಫ್‌ಟಿ ಮಾರುತಿ ಸಾಳುಂಕಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net