ಕಾರಟಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಬಿ ಡ್ಯಾಂ ಹೂಳಿಗೆ ಪರ್ಯಾಯವಾಗಿ ಮೂರು ಆಯ್ಕೆಗಳಿವೆ. ನಮ್ಮ ಸರ್ಕಾರ ಹೂಳೆತ್ತುವ ಬಗ್ಗೆ ಚಿಂತನೆ ನಡೆಸಿಲ್ಲ. ಕೇಂದ್ರ ಸರ್ಕಾರ ನೂತನ ತಂತ್ರಜ್ಞಾನ ಬಳಸಿ ತೆರವು ಮಾಡಲು ಯೋಜಿಸುತ್ತಿದೆ. ಹೂಳು ತೆರವು ಮಾಡಿದರೆ ನಮಗೆ ಅಭ್ಯಂತರವಿಲ್ಲ. ನಮಗೆ ನಮ್ಮ ಪಾಲಿನ ನೀರು ಬೇಕು. ಸಮಾನಾಂತರ ಜಲಾಶಯ ಬೇಕೆಂದು ಬೇಡಿಕೆ ಸಲ್ಲಿಸಿದ್ದೇವೆ. ಡ್ಯಾಂ ಮೇಲ್ಭಾಗದಲ್ಲಿ ಮೂರು ಸಾವಿರ ಎಕರೆ ಸರ್ಕಾರಿ ಜಮೀನು ಇದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದರು.