ಕೊಪಣಗಿರಿಗೆ ಉತ್ತಮ ಫಲಿತಾಂಶ

puc results
puc results
Published on

ಪ್ರಮುಖ ಮುಖ್ಯಾಂಶಗಳು

  • ಕಕ ಜಿಲ್ಲೆಗಳಿಗೆ ಕೊಪ್ಪಳ ಟಾಪ್​
  • ಶೇ.86.8 ಮಕ್ಕಳು ಪಾಸ್​
  • ರಾಜ್ಯಕ್ಕೆ 17 ನೇ ಸ್ಥಾನ
ಕೊಪ್ಪಳ: ದ್ವೀತಿಯ ಪಿಯುಸಿ ಲಿತಾಂಶ ಗುರುವಾರ ಪ್ರಕಟಗೊಂಡಿದ್ದು ಶೇ.86.8ರಷ್ಟು ಮಕ್ಕಳು ಉತ್ತೀರ್ಣರಾಗುವ ಮೂಲಕ ಕೊಪ್ಪಳ ರಾಜ್ಯದಲ್ಲಿ 23ನೇ ಸ್ಥಾನದಿಂದ 17ಕ್ಕೆ ಏರಿಕೆಯಾಗಿದೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಶೇ.19.6ರಷ್ಟು ಏರಿಕೆ ಕಂಡಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲೇ ಕೊಪಣಗಿರಿ ಟಾಪ್​ ಜಿಲ್ಲೆಯಾಗಿ ಹೊರ ಹೊಮ್ಮಿರುವುದು ವಿಶೇಷ.
13,312 ವಿದ್ಯಾರ್ಥಿಗಳು ಪರೀೆ ಎದುರಿಸಿದ್ದು, 11,555 (ಶೇ.86.8) ಪಾಸ್​ ಆಗಿದ್ದಾರೆ. 4,633 (ಶೇ.74.22) ಬಾಲಕರು, 7,556 (ಶೇ.81.55) ಬಾಲಕಿಯರು ಉತ್ತೀರ್ಣರಾಗಿದ್ದು ಹುಡುಗರನ್ನು ಹಿಂದಿಕ್ಕಿ ಹುಡುಗಿಯರು ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ 5,106 ಅಭ್ಯರ್ಥಿಗಳು ಎಕ್ಸಾಂ ಬರೆದಿದ್ದು 4,001(ಶೇ.78.36) ಮಕ್ಕಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 2,352 ಜನ ಪರೀೆ ಬರೆದಿದ್ದು 2,126 (ಶೇ.90.39) ಪಾಸ್​ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 5,854 ಮಕ್ಕಳು ಪರೀೆಗೆ ಹಾಜರಾಗಿದ್ದು 5,428 (ಶೇ.92.72) ಮಕ್ಕಳು ಉತ್ತೀರ್ಣರಾಗುವ ಮೂಲಕ ವಿಜ್ಞಾನ ವಿಭಾಗ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನ ಶಿಕ್ಷಣಕ್ಕೆ ಅರ್ಹತೆ ಪಡೆದಿದ್ದಾರೆ.
ಗ್ರಾಮೀಣ ಭಾಗದ 5,375 ಮಕ್ಕಳು ಎಕ್ಸಾಂ ಬರೆದಿದ್ದು 4,837 (ಶೇ.89.99) ಪಾಸ್​ ಆಗುವ ಮೂಲಕ ನಗರ ಪ್ರದೇಶದ ಮಕ್ಕಳನ್ನು ಹಿಂದಿಕ್ಕಿದ್ದಾರೆ. ನಗರ ಭಾಗದ 7,939 ವಿದ್ಯಾರ್ಥಿಗಳು ಪರೀೆ ಎದುರಿಸಿ 6,718 (ಶೇ.84.64) ಪಾಸ್​ ಆಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀೆ ಬರೆದ 7,332 ಅಭ್ಯರ್ಥಿಗಳ ಪೈಕಿ 6,502 (ಶೇ.88.68) ತೇರ್ಗಡೆಯಾದರೆ, ಕನ್ನಡ ಮಾಧ್ಯಮದಲ್ಲಿ ಎಕ್ಸಾಂ ಬರೆದ 8,171 ಮಕ್ಕಳಲ್ಲಿ 5,687 (ಶೇ.69.6) ತೇರ್ಗಡೆ ಹೊಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net