ಜುಡೋ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ

ತಾವರಗೇರಾ ವಿದ್ಯಾರ್ಥಿನಿ ಸವಿತಾ ರಾಷ್ಟ್ರೀಯ ಪ್ಯಾರಾಜೂಡೋ ಚಾಂಪಿಯನ್‌ಷಿಪ್ ನಲ್ಲಿ ಬಂಗಾರದ ಪದಕ ಪಡೆದಿರುವುದು.
ತಾವರಗೇರಾ ವಿದ್ಯಾರ್ಥಿನಿ ಸವಿತಾ ರಾಷ್ಟ್ರೀಯ ಪ್ಯಾರಾಜೂಡೋ ಚಾಂಪಿಯನ್‌ಷಿಪ್ ನಲ್ಲಿ ಬಂಗಾರದ ಪದಕ ಪಡೆದಿರುವುದು.
Published on
ತಾವರಗೇರಾ: ಡಿ.22 ರಂದು ರಾಜಸ್ತಾನದಲ್ಲಿ ನಡೆದ 14ನೇ ರಾಷ್ಟ್ರೀಯ ಪ್ಯಾರಾ ಜುಡೋ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಪಟ್ಟಣದ ವಿದ್ಯಾರ್ಥಿ ಸವಿತಾ ಚಿನ್ನದ ಪದಕಗಳಿಸಿ ಸಾಧನೆ ಮಾಡಿದ್ದಾರೆ.
ಜಮ್ಮು ಕಾಶ್ಮೀರದ ಎದುರಾಳಿಯನ್ನು ಮಣಿಸುವ ಮೂಲಕ ಜಯಗಳಿಸಿದ್ದಾರೆ. ವಿದ್ಯಾರ್ಥಿ ತಂದೆ ನಿರಪಾದೆಪ್ಪ ಓಲೆಕಾರ ಅವರು ಸೈಕಲ್ ರಿಪೇರಿ ವೃತ್ತಿ ನಿರ್ವಹಿಸುತ್ತಿದ್ದು, ಮಗಳು ಕ್ರೀಡೆಯಲ್ಲಿ ಪದಕ ಪಡೆದಿರುವುದು ಸಂತಸ ವ್ಯಕ್ತಪಡಿದ್ದಾರೆ. ಈ ಹಿಂದೆ ಸವಿತಾ ಅವರು ಕುಕನೂರಿನ ನವೋದಯ ಶಾಲೆಯಿಂದ ಸ್ಪೋರ್ಟ್ಸ್ ತರಬೇತಿಯಲ್ಲಿ ಸೆಲೆಕ್ಟ್ ಆಗಿದ್ದರು. ನಂತರ ಆದಿತ್ಯ ಮೆಹತಾ ಫೌಂಡೇಷನ್ ಸಂಸ್ಥೆಯ ಸಹಭಾಗಿತ್ವದಲ್ಲಿ ತರಬೇತಿ ಪಡೆದು ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿ ವಿಶೇಷವಾಗಿ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದ ಸವಿತಾ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net