ಗಂಗಾವತಿ ಶ್ರೀಕೊಟ್ಟೂರುಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಪ್ರಶಿಕ್ಷಣಾರ್ಥಿಗಳನ್ನು ಸನ್ಮಾನಿಸಲಾಯಿತು. ಕಲ್ಮಠದ ಡಾ.ಕೊಟ್ಟೂರುಸ್ವಾಮೀಜಿ, ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್, ಆಡಳಿತಾಧಿಕಾರಿ ಬಸಲಿಂಗಮ್ಮ ಇತರರಿದ್ದರು.
ಗಂಗಾವತಿ: ನಿರಂತರ ಅಧ್ಯಯನ ಮತ್ತು ಪ್ರಯತ್ನದ ಮೂಲಕ ಪ್ರಶಿಕ್ಷಣಾರ್ಥಿಗಳು ಉನ್ನತ ಸಾಧನೆ ಮಾಡಬೇಕಿದ್ದು, ಕಲಿಸಿದ ಶಿಕ್ಷಕರ ಸೇವೆಯನ್ನು ಎಂದಿಗೂ ಮರೆಯಬಾರದು ಎಂದು ಕಲ್ಮಠದ ಡಾ.ಕೊಟ್ಟೂರುಸ್ವಾಮೀಜಿ ಹೇಳಿದರು.ಗಂಗಾವತಿ
ನಿರಂತರ ಅಧ್ಯಯನ ಮತ್ತು ಪ್ರಯತ್ನದ ಮೂಲಕ ಪ್ರಶಿಕ್ಷಣಾರ್ಥಿಗಳು ಉನ್ನತ ಸಾಧನೆ ಮಾಡಬೇಕಿದ್ದು, ಕಲಿಸಿದ ಶಿಕ್ಷಕರ ಸೇವೆಯನ್ನು ಎಂದಿಗೂ ಮರೆಯಬಾರದು ಎಂದು ಕಲ್ಮಠದ ಡಾ.ಕೊಟ್ಟೂರುಸ್ವಾಮೀಜಿ ಹೇಳಿದರು.
ನಗರದ ಶ್ರೀಕೊಟ್ಟೂರುಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಕಲ್ಮಠ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯೆಗೆ ವಿನಯವೇ ಭೂಷಣವಾಗಿದ್ದು, ಗುರು ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೂಲಕ ಉನ್ನತ ಸಾಧನೆಯ ಗುರಿ ತಲುಪುವಂತೆ ಸಲಹೆ ನೀಡಿದರು.
ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಕಾರಟಗಿಯ ಅಗ್ನಿಶಾಮಕ ಸಹಾಯಕ ಮಂಜುನಾಥ ಮಾತನಾಡಿ, ಗುರು ಶಿಷ್ಯರ ಸಂಬಂಧ ನಿರಂತರವಾಗಿರಬೇಕಿದ್ದು,ಕಲಿತ ಸಂಸ್ಥೆ ಮತ್ತು ಕಲಿಸಿದ ಗುರುಗಳನ್ನು ನಿತ್ಯ ಸ್ಮರಿಸಬೇಕು ಎಂದರು.
ಟಿಇಟಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಗೋವಿಂದಪ್ಪ, ನವೀನ ಕುಮಾರ, ಅನುಷಾ,ದೇವಮ್ಮ, ಸರಸ್ವತಿ, ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಶರಣಯ್ಯ ಹಿರೇಮಠ, ಪ್ರಶಿಕ್ಷಣಾರ್ಥಿಗಳಾದ ಕೆ.ನೇತ್ರಾವತಿ, ಸುಮತಿ, ಸುಜಾತಾ, ಅಕ್ಷತಾ ಕೊಳಗಲ್ ಇತರರಿದ್ದರು.