ಜಾಗತಿಕ ಉದ್ಯಮ ಸಮ್ಮೇಳನ 29ರಿಂದ

ಶರಣ್​ ಪಾಟೀಲ್​.
ಶರಣ್​ ಪಾಟೀಲ್​.
Published on
ಕೊಪ್ಪಳ : ಇಂಟರ್ನ್ಯಾಷನಲ್​ ಲಿಂಗಾಯತ ಯೂಥ್​ ೋರಮ್​ನಿಂದ ಜ.29ರಿಂದ ೆ.2ವರೆಗೆ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ೋರಮ್​ನ ಹುಬ್ಬಳ್ಳಿ ಚಾಪ್ಟರ್​ ಅಧ್ಯಕ್ಷ ಶರಣ್​ ಪಾಟೀಲ್​ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ಯಾಲೆಸ್​ ಗ್ರೌಂಡ್ಸ್​ನ ವೈಟ್​ ಪೆಟಲ್ಸ್​ನಲ್ಲಿ ಸಮ್ಮೇಳನ ಇರಲಿದೆ. ಹಿಂದಿನ ಸಮ್ಮೇಳನಗಳಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಅತ್ಯಧಿಕ ಹೂಡಿಕೆ ಆಗಿದೆ. ಮೈಸೂರು ಸಮ್ಮೇಳನದಲ್ಲಿ 130 ಕೋಟಿ ರೂ., ಹುಬ್ಬಳ್ಳಿಯಲ್ಲಿ 64 ಕೋಟಿ ರೂ., ಬೆಂಗಳೂರು ಸಮ್ಮೇಳನದಲ್ಲಿ 35 ಕೋಟಿ ರೂ. ಒಡಂಬಡಿಕೆ ನಡೆದಿವೆ. ವ್ಯಾಪಾರ, ನೆಟ್​ವರ್ಕಿಂಗ್​ ಮತ್ತು ಉದ್ಯಮ ವೃದ್ಧಿಯಲ್ಲಿ ಹೊಸ ಮಾನದಂಡ ಸ್ಥಾಪಿಸುವ ನಿಟ್ಟಿನಲ್ಲಿ ಈ ಬಾರಿ ಸಮ್ಮೇಳನ ಆಯೋಜಿಸಿದ್ದೇವೆ. 75 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀೆ ಇದೆ. ನಾಲ್ಕು ದಿನಗಳಲ್ಲಿ ಉದ್ಯಮಿಗಳು, ಕೈಗಾರಿಕೆ ನಾಯಕರು, ನೀತಿ ನಿರ್ಧಾರಕರು, ಸ್ಟಾರ್ಟ್​ಪ್​ಗಳು, ಎಂಎಸ್​ಎಂಇಗಳು ಭಾಗಿಯಾಗಲಿವೆ.
260ಕ್ಕೂ ಹೆಚ್ಚು ಸ್ಟಾಲ್​ಗಳಿರಲಿವೆ. ಜ.29ರ ಸಂಜೆ 4.30ಕ್ಕೆ ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸುವರು. ಸಚಿವರಾದ ಎಂ.ಬಿ.ಪಾಟೀಲ್​, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ, ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ವಿಆರ್​ಎಲ್​ ಸಂಸ್ಥೆ ಸಿಎಂಡಿ ವಿಜಯ ಸಂಕೇಶ್ವರ ಇತರ ಗಣ್ಯರು ಭಾಗಿಯಾಗುವರು. ೆ.1ರಂದು ನಡೆವ ಸಮಾರೋಪ ಸಮಾರಂಭವನ್ನು ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ.ಶ್ರೀ ಬಸವರ ಮಾರುಳಸಿದ್ದ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು. ಸಚಿವ ಡಾ.ಶರಣಪ್ರಕಾಶ ಪಾಟೀಲ್​, ಕೆವಿಎಲ್​ಡಿಸಿಎಲ್​ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್​ ಬಿದರಿ, ಮಾಜಿ ಸಚಿವ ಮುರುಗೇಶ ನಿರಾಣಿ ಇತರರು ಭಾಗಿಯಾಗುವರು ಎಂದು ತಿಳಿಸಿದರು.
ಪ್ರಮುಖರಾದ ಚಿದಾನಂದ ಮುದಕಲಿ, ಅಭಿಷೇಕ ಗುರುರಾಜ ಹಲಗೇರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net