ಅನ್ನದಾತರಿಗೆ ಪರಿಹಾರ ಕೊಡಿ

ರೈತರಿಗೆ ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ವಿಪ ಸದಸ್ಯೆ ಹೇಮಲತಾ ನಾಯಕ,  ಪದಾಧಿಕಾರಿಗಳಾದ ವೀರೇಶ ಸಜ್ಜನ್​, ಚಂದ್ರಶೇಖರ ಪಾಟೀಲ್​ ಹಲಗೇರಿ, ಮಹಾಂತೇಶ್​ ಪಾಟೀಲ್​ ಮೈನಳ್ಳಿ, ಕೀರಪ್ಪ ಆರೇರ್​, ಗಣೇಶ್​ ಹೋರಟತ್ನಾಳ ಇದ್ದರು.
ರೈತರಿಗೆ ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಪದಾಧಿಕಾರಿಗಳಾದ ವೀರೇಶ ಸಜ್ಜನ್​, ಚಂದ್ರಶೇಖರ ಪಾಟೀಲ್​ ಹಲಗೇರಿ, ಮಹಾಂತೇಶ್​ ಪಾಟೀಲ್​ ಮೈನಳ್ಳಿ, ಕೀರಪ್ಪ ಆರೇರ್​, ಗಣೇಶ್​ ಹೋರಟತ್ನಾಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸೈಕಲ್​ ಜಾಥ ನಡೆಸಿ ಬಿಜೆಪಿಗೆ ಆಗ್ರಹ
ಕೊಪ್ಪಳ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಉಳಿಕೆ ಕರೆ ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಸೈಕಲ್​ ಜಾಥಾ ನಡೆಸುವ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.
ಲಾಂತರ ರೂ. ವ್ಯಯಿಸಿ ರೈತರು ಬಾಳೆ ಬೆಳೆದಿದ್ದಾರೆ. ನೂರಾರು ಎಕರೆ ಬಾಳೆ ನಾಶವಾಗಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಪೂರ್ವ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ರೈತರು ದೇಶದ ಅನ್ನದಾತರು. ರೈತ ಉಳಿದರೆ ದೇಶದ ಉಳಿವು. ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಅಶೋಕ ವೃತ್ತದಿಂದ ಡಿಸಿ ಕಚೇರಿವರೆಗೆ ಜಾಥಾ ಸಾಗಿತು. ಜಿಲ್ಲಾಡಳಿತ ಭವನದೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಧರಣಿ ನಡೆಸಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಶಾಸಕ ರಾವೇಂದ್ರ ಹಿಟ್ನಾಳ, ಆಡಳಿತ ವಿರುದ್ಧ ಅಸಮಾಧಾನ ಹೊರ ಹಾಕಿದರು. ಬಳಿಕ ಎಡಿಸಿ ಸಿದ್ರಾಮೇಶ್ವರ ಮೂಲಕ ಮನವಿ ಸಲ್ಲಿಸಿದರು.
ವಿಧಾನ ಪರಿಷತ್​ ಸದಸ್ಯೆ ಹೇಮಲತಾ ನಾಯಕ, ಪದಾಧಿಕಾರಿಗಳಾದ ವೀರೇಶ ಸಜ್ಜನ್​, ಚಂದ್ರಶೇಖರ ಪಾಟೀಲ್​ ಹಲಗೇರಿ, ಮಹಾಂತೇಶ್​ ಪಾಟೀಲ್​ ಮೈನಳ್ಳಿ, ಕೀರಪ್ಪ ಆರೇರ್​, ಗಣೇಶ್​ ಹೋರಟತ್ನಾಳ, ಪ್ರದಿಪ್​ ಹಿಟ್ನಾಳ್​, ಅಶೋಕ್​ ಗುಳದಳ್ಳಿ, ವೀರೇಶ್​ ಕಾಸನಕಂಡಿ, ಸುನಿಲ್​ ಹೆಸರೂರ್​, ಪ್ರಭುಗೌಡ ಪಾಟೀಲ್​, ಮಹೇಶ್​ ಅಂಗಡಿ, ಗವಿ ಗೊರವರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net