ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ

ಅಳವಂಡಿ ಸಮೀಪದ ಭೋಚನಹಳ್ಳಿಯಲ್ಲಿ ಕನಕ ಗುರು ಸೇವಾ ಸಮಿತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
ಅಳವಂಡಿ ಸಮೀಪದ ಭೋಚನಹಳ್ಳಿಯಲ್ಲಿ ಕನಕ ಗುರು ಸೇವಾ ಸಮಿತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಾಮೀಜಿ
  • ಆಶೀರ್ವಚನ
  • ಸಮಾಜ
ಅಳವಂಡಿ: ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸುವ ಜತೆಗೆ ಬಡ ಕುಟುಂಬಗಳ ಆರ್ಥಿಕ ನಷ್ಟ ತಡೆಯುತ್ತವೆ ಎಂದು ಮೈನಹಳ್ಳಿ -ಬಿಕನಹಳ್ಳಿಯ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಭೋಚನಹಳ್ಳಿಯಲ್ಲಿ ಕನಕ ಗುರು ಸೇವಾ ಸಮಿತಿಯಿಂದ ಗ್ರಾಮದ ಕನಕ ಗುರು ದೇವಸ್ಥಾನದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹಗಳು ಸೌಹಾರ್ದತೆ, ಸಮಾನತೆ ಮತ್ತು ಸಾಮಾಜಿಕ ಏಕತೆ ಹೆಚ್ಚಿಸುವುದರೊಂದಿಗೆ ಆಡಂಬರ ಮತ್ತು ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತವೆ. ಮದುವೆ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಇದಕ್ಕಾಗಿ ಅನಗತ್ಯ ಹಣ ಖರ್ಚು ಮಾಡದೆ ಸಾಮೂಹಿಕ ವಿವಾಹದಲ್ಲಿ ಸಂಸಾರ ಜೀವನಕ್ಕೆ ಪದಾರ್ಪಣೆ ಮಾಡಬೇಕು. ದಂಪತಿಗಳು ಮಿತ ಸಂತಾನ ಹಾಗೂ ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ, ಅತ್ತೆ ಮಾವಂದಿರನ್ನು ತಂದೆ-ತಾಯಿಯಂತೆ ನೋಡಿಕೊಳ್ಳಬೇಕು ಎಂದರು.
ಕುರುಬರ ಸಂಘದ ತಾಲೂಕು ಉಪಾಧ್ಯಕ್ಷ ಭರಮಪ್ಪ ನಗರ ಮಾತನಾಡಿ, ಸಾಮೂಹಿಕ ವಿವಾಹ ಎಂದರೆ ಅದು ಕೇವಲ ಬಡ ಜನರ ಮದುವೆ ಕಾರ್ಯಕ್ರಮ ಎಂದು ತಿಳಿದುಕೊಳ್ಳುವುದು ತಪ್ಪು. ಪವಿತ್ರವಾದ ಶರಣರ, ಸಂತರ, ಧಾರ್ಮಿಕ ಕ್ಷೇತ್ರಗಳಲ್ಲಿ ಗುರುಗಳು, ಮಠಾಧೀಶರ ಆಶೀರ್ವಾದ ಹಾಗೂ ಅಪಾರ ಭಕ್ತರ ಸಮ್ಮುಖದಲ್ಲಿ ಸಾಮೂಹಿಕ ವಿವಾಹದಲ್ಲಿ ಬಂಧನಕ್ಕೊಳಗಾಗುವುದು ಜೀವನದ ಸಾರ್ಥಕ ಸಮಯವಾಗಿದೆ ಎಂದರು.
ಪ್ರಮುಖರಾದ ಭರಮಪ್ಪ ನಗರ, ಭೀಮೇಶಪ್ಪ ಹವಳಣ್ಣವರ, ನಿಂಗಪ್ಪ ಮೇಟಿ, ನಿಂಗಪ್ಪ ಆವುಜಿ, ಕೊಟ್ರಯ್ಯ ಗುರುವಿನ, ಹನುಮೇಶ ಆವುಜಿ, ರಾಮಣ್ಣ, ದೇವೇಂದ್ರಪ್ಪ, ಪರಸಪ್ಪ ಹುಲಕೋಟಿ, ಗವಿ ಸುಗ್ಗಿ, ಯಲ್ಲು ಬೋಚನಹಳ್ಳಿ, ಕುಳ್ಳಲೆಪ್ಪ, ನಿಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net