ಆಶ್ರಯ ನಿವೇಶನ ನಿರ್ಗತಿಕರಿಗೆ ಹಂಚಲು ಕ್ರಮ

ಲೇಔಟ್‌ವೊಂದಕ್ಕೆ ರಸ್ತೆ ಇಲ್ಲದಿರುವುದನ್ನು ತೋರಿಸಿ ಅಧಿಕಾರಿಗಳ ವಿರುದ್ಧ ಪಪಂ ಸದಸ್ಯ ಶೇಷಪ್ಪ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು. ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿಂಗ ನಾಯಕ, ಸದಸ್ಯರಾದ ಅನಿಲ ಬಿಜ್ಜಳ, ಸಂಗಪ್ಪ ಸಜ್ಜನ ಇತರರಿದ್ದರು.
ಲೇಔಟ್‌ವೊಂದಕ್ಕೆ ರಸ್ತೆ ಇಲ್ಲದಿರುವುದನ್ನು ತೋರಿಸಿ ಅಧಿಕಾರಿಗಳ ವಿರುದ್ಧ ಪಪಂ ಸದಸ್ಯ ಶೇಷಪ್ಪ ಪೂಜಾರ ಆಕ್ರೋಶ ವ್ಯಕ್ತಪಡಿಸಿದರು. ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿಂಗ ನಾಯಕ, ಸದಸ್ಯರಾದ ಅನಿಲ ಬಿಜ್ಜಳ, ಸಂಗಪ್ಪ ಸಜ್ಜನ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಹೇಳಿಕೆ
  • ಪಪಂ ಸಾಮಾನ್ಯ ಸಭೆ

ಕನಕಗಿರಿ: ಕಲಕೇರಿರಸ್ತೆಯ ಆಶ್ರಯ ಯೋಜನೆ ಬಡಾವಣೆಯಲ್ಲಿಉಳಿದ 131ನಿವೇಶನಗಳನ್ನುಪೌರ ಕಾರ್ಮಿಕರು,ಬಡವರು,ಸೂರುಇಲ್ಲದವರು ಹಾಗೂ ನಿರ್ಗತಿಕರಿಗೆನೀಡಲು ಆಶ್ರಯ ಸಮಿತಿ ಅಧ್ಯಕ್ಷರಿಗೆಪತ್ರ ಬರೆಯಲಾಗುವುದು ಎಂದುಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿಹೇಳಿದರು.

ಇಲ್ಲಿನಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರನಡೆದ ಸಾಮಾನ್ಯ ಸಭೆಯಲ್ಲಿಮಾತನಾಡಿದರು.ಆಶ್ರಯಬಡಾವಣೆಯಲ್ಲಿ ಒಟ್ಟು 171ನಿವೇಶನರಚನೆ ಮಾಡಲಾಗಿದ್ದು,ಈಪೈಕಿ 40ನಿವೇಶಗಳನ್ನುಅರ್ಹ ಫಲಾನುಭವಿಗಳಿಗೆ ಹಂಚಿಕೆಮಾಡಿ ಹಕ್ಕುಪತ್ರ ವಿತರಿಸಲಾಗಿದೆ.ಉಳಿದನಿವೇಶನಗಳನ್ನು ಹಂಚಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಪಟ್ಟಣಕ್ಕೆಹತ್ತಿರವಾದ ಕೆರೆ ತುಂಬುವ ಯೋಜನೆಯಡಿಭರ್ತಿಯಾಗಿರುವ ಲಕ್ಷ್ಮೀದೇವಿಕೆರೆಯನ್ನು ಪ್ರವಾಸಿ ತಾಣವನ್ನಾಗಿಮಾಡಲು ಪ್ರವಾಸೋದ್ಯಮ ಇಲಾಖೆಯಕೇಂದ್ರ ಸರ್ಕಾರದ 2.0ಅಡಿಯಲ್ಲಿಅಭಿವೃದ್ಧಿಪಡಿಸಲು ಅನುದಾನದೊರೆಯಲಿದೆ ಎಂದರು.

ವಾಲ್ಮೀಕಿ,ಅಂಬೇಡ್ಕರ್,ಕನಕಭವನ ನಿರ್ಮಾಣಕ್ಕೆ ಸಿಎ ನಿವೇಶಗಳನ್ನುಗುರುತಿಸುವುದು.ತ್ರಿವೇಣಿಸಂಗಮ ಶುಚಿಗೊಳಿಸಲಾಗುವುದು.ಪಂಚಾಯಿತಿವ್ಯಾಪ್ತಿಯ ವಾಣಿಜ್ಯ ಮಳಿಗೆಗಳಬಾಡಿಗೆಗೆ ನೀಡುವುದು,ಪಟ್ಟಣದವಿವಿಧ ವಾರ್ಡ್‌ಗಳ ತ್ಯಾಜ್ಯಸಂಗ್ರಹ ಪ್ರದೇಶಗಳಲ್ಲಿ ಮರಂಹಾಕಿಸುವುದು,ಶವಸಾಗಣೆ ವಾಹನ ಖರೀದಿಸಲುತೀರ್ಮಾನಿಸಲಾಯಿತು.ಬಾಕಿಉಳಿದ 31ಲಕ್ಷರೂ.ನೀರಿನಕರ,ಆಸ್ತಿಕರ ವಸೂಲಿಗೆ ಕ್ರಮ ವಹಿಸಲುಚರ್ಚಿಸಲಾಯಿತು.

ಶವದಗುಂಡಿ ತೆಗೆಯಲಿಕ್ಕೆ ಕಾರ್ಮಿಕರಸಮಸ್ಯೆ ಉಂಟಾಗಿದ್ದರಿಂದಪಂಚಾಯಿತಿಯಿಂದ ಶವ ಸಂಸ್ಕಾರಕ್ಕೆಜೆಸಿಬಿ ಬಾಡಿಗೆ ನೀಡಲು ನಿರ್ಧರಿಸಲಾಯಿತು.ಫ್ಲೆಕ್ಸ್ಅಳವಡಿಸಲು ಕಡ್ಡಾಯ ಅನುಮತಿಪಡೆಯಬೇಕಲ್ಲದೇ,ಸಂತೆಕರದಲ್ಲಿ ಪಪಂಗೆ ನೀಡಲು ದೇವಸ್ಥಾನಕ್ಕೆಪತ್ರ ಬರೆಯಬೇಕು.ಪಂಚಾಯಿತಿಆದಾಯಕ್ಕಾಗಿ ಸಿಎ ಸೈಟುಗಳನ್ನುಹರಾಜು ಮಾಡಲು ಜಿಲ್ಲಾಧಿಕಾರಿಯಿಂದಅನುಮತಿ ಪಡೆಯಲು ಪತ್ರ ಬರೆಯಲುಸದಸ್ಯರು ಆಗ್ರಹಿಸಿದರು.

ಪಪಂಅಧ್ಯಕ್ಷೆ ಹುಸೇನಬೀ ಚಳ್ಳಮರದ,ಉಪಾಧ್ಯಕ್ಷಕಂಠಿಂಗ ನಾಯಕ,ಸದಸ್ಯರಾದಶರಣೇಗೌಡ,ಅನಿಲಬಿಜ್ಜಳ,ಸಂಗಪ್ಪಸಜ್ಜನ,ರಾಜಸಾಬನಂದಾಪೂರ,ಅಭಿಷೇಕಕಲುಬಾಗಿಲಮಠ,ಬಸಮ್ಮಕುರುಗೋಡು,ನಂದಿನಿರಾಮಾಂಜನೇಯರೆಡ್ಡಿ,ತನುಶ್ರೀರಾಮಚಂದ್ರ,ಶೈನಾಜಾಬೇಗಂಗುಡಿಹಿಂದಲ,ಹುಸೇನಬೀಸಂತ್ರಾಸ್,ಜೆಸ್ಕಾಂಅಧಿಕಾರಿ ಸಿದ್ದನಗೌಡ ಇತರರಿದ್ದರು.

ಅಕ್ರಮಬಡಾವಣೆಗೆ ಹಣ ಪಡೆದ ಆರೋಪ

ನಿಯಮದಂತೆರಸ್ತೆಯಿಲ್ಲದ,ತಕರಾರುಸಲ್ಲಿಸಲಾಗಿರುವ ಬಡಾವಣೆಗೆಮುಖ್ಯಾಧಿಕಾರಿ 20ಲಕ್ಷರೂ.ಲಂಚಪಡೆದು ಫಾರಂ 3ನೀಡಿದ್ದೀರಿಎಂದು ಸಭೆಯಲ್ಲಿ ಪಪಂ ಸದಸ್ಯರಾದಶೇಷಪ್ಪ ಪೂಜಾರ,ಹನುಮಂತಬಸರಿಗಿಡ ಆಕ್ರೋಶ ವ್ಯಕ್ತಪಡಿಸಿದರು.ಆಗಜೆಇ ಮಂಜುನಾಥರವರು ಈ ಲೇಔಟಿಗೆಆರು ರಸ್ತೆಗಳಿವೆ ಎಂದು ದಾಖಲೆಯಲ್ಲಿತೋರಿಸಿದ್ದಾರೆ.ಜಿಲ್ಲಾಧಿಕಾರಿ,ಟೌನ್ಪ್ಲಾನ್ ಅಧಿಕಾರಿಗಳು ಪರಿಶೀಲನೆನಡೆಸಿ ಭೂ ಪರಿವರ್ತನೆ ಮಾಡಿರುತ್ತಾರೆಎಂದು ಸ್ಪಷ್ಟನೆ ನೀಡಿದರು.ಆದರೆ,ಗಾಯರಾಣಜಾಗದಲ್ಲಿ ರಸ್ತೆ ತೋರಿಸಿರುವುದುಅಕ್ರಮ.ಒಂದೂರಸ್ತೆಯೂ ಇಲ್ಲ.ಮೂಲರಸ್ತೆಯೇ ಬೇರೆ ಅಲ್ಲಿ ಅವರಿಗೆಸಂಚರಿಸಲು ಅವಕಾಶವಿಲ್ಲದಂತಾಗಿದೆ.ಇದುಕಾನೂನು ಬಾಹಿರವಾಗಿದ್ದು,ಅನಧಿಕೃತಬಡಾವಣೆಯಲ್ಲಿ ಮನೆಗಳುನಿರ್ಮಾಣವಾಗುತ್ತಿದ್ದು,ನೀರು,ವಿದ್ಯುತ್ಸೌಲಭ್ಯ ನೀಡಿರುವುದು ಯಾಕೆ ಎಂದುಪ್ರಶ್ನಿಸಿದರು.ಇದಕ್ಕೆಇನ್ನಷ್ಟು ಸದಸ್ಯರು ತಲೆಅಲ್ಲಾಡಿಸಿದರು.ಎಲ್ಲಸಮಸ್ಯೆ ಬಗೆಹರಿಯುವವರೆಗೆ ಶೇ.60ನಿವೇಶನಮಂಜೂರು ಮಾಡುವುದನ್ನು ತಡೆಯಲಾಗುವುದುಎಂದು ಮುಖ್ಯಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net