ಗಂಗಾವತಿ ಗ್ರಾಮದೇವತೆ ದುರ್ಗಾದೇವಿ ತೇರು ಜೋರು

ಗಂಗಾವತಿ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರೆ ನಿಮಿತ್ತ ಮಹಾರಥೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು. ಶ್ರೀದುರ್ಗಾದೇವಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿರುವುದು.
ಗಂಗಾವತಿ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರೆ ನಿಮಿತ್ತ ಮಹಾರಥೋತ್ಸವ ಶನಿವಾರ ಅದ್ದೂರಿಯಾಗಿ ನೆರವೇರಿತು. ಶ್ರೀದುರ್ಗಾದೇವಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿರುವುದು.
Published on
ಗಂಗಾವತಿ: ನಗರದ ಗ್ರಾಮದೇವತೆ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.
ಪ್ರಾಚೀನ ಕಾಲದ ದೇವಾಲಯವಾಗಿದ್ದು, ಕೆಲ ವರ್ಷಗಳ ಹಿಂದೆ ರಥೋತ್ಸವ ಆರಂಭವಾಗಿದೆ. ಜಾತ್ರಾಮಹೋತ್ಸವ ನಿಮಿತ್ತ ದೇವಾಲಯದಲ್ಲಿ ಬೆಳಗ್ಗೆ ಮೂರ್ತಿಗೆ ಅಭಿಷೇಕ, ಮಹಾಸಂಕಲ್ಪ, ಗಣಪತಿ ಪೂಜೆ, ಕಂಕಣಧಾರಣೆ, ಕಲಶಾರಾಧನೆ, ಕುಂಕುಮಾರ್ಚನೆ, ಲಲಿತಸಹ್ರನಾಮ ಪಾರಾಯಣ, ರಥಾಂಗ ಹೋಮ, ಪೂರ್ಣಾಹುತಿ, ಪಲ್ಲಕ್ಕಿ ಉತ್ಸವ, ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ಪುರೋಹಿತ ಮಹೇಶ ಭಟ್ ಜೋಶಿ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಇದಕ್ಕೂ ಮುನ್ನ ಶ್ರೀದುರ್ಗಾದೇವಿ ಭಾವಚಿತ್ರವನ್ನು ಪಲ್ಲಕ್ಕಿ ಸೇವೆಯೊಂದಿಗೆ ಕಲ್ಮಠದ ಬಳಿ ಪಾದಗಟ್ಟೆಯಿಂದ ಮೆರವಣಿಗೆ ನೆರವೇರಿಸಲಾಯಿತು. ಡೊಳ್ಳು ಸೇರಿ ಇತರೆ ವಾದ್ಯಮೇಳ ಭಾಗವಹಿಸಿದ್ದವು. ಸಂಜೆ ವೇಳೆ ಸರ್ವಾಂಲಕೃತ ಮಹಾರಥೋತ್ಸವನ್ನು ಅಪಾರ ಭಕ್ತ ಸಮೂಹದ ಮಧ್ಯೆ ಪಾದಗಟ್ಟೆವರಿಗೂ ನೆರವೇರಿಸಲಾಯಿತು.
ಮಾಜಿ ಸಂಸದರಾದ ಎಚ್.ಜಿ.ರಾಮುಲು, ಎಸ್.ಶಿವರಾಮನಗೌಡ, ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಪರಣ್ಣಮುನವಳ್ಳಿ, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಮಾಜಿ ಸದಸ್ಯರಾದ ವೀರಭದ್ರಪ್ಪ ನಾಯಕ, ವೆಂಕಟೇಶ ಅಮರಜ್ಯೋತಿ, ರಾಜು, ಬಸವರಾಜ ಸ್ವಾಮಿ ಮಳೀಮಠ, ಎಚ್.ಎಂ.ಸಿದ್ರಾಮಯ್ಯಸ್ವಾಮಿ ಸೇರಿ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net