ಜಿಲ್ಲೆಯಲ್ಲಿ ಹೊಸದಾಗಿ ಪಟ್ಟಣ ಪಂಚಾಯಿತಿ ಆಗಿ ಮೆಲ್ದರ್ಜೆಗೇರಿದ ಹನುಮಸಾಗರ ಸೇರಿ 10 ನಗರ&ಸ್ಥಳಿಯ ಸಂಸ್ಥೆಗಳಿವೆ. ಕೊಪ್ಪಳ, ಗಂಗಾವತಿ ನಗರಸಭೆಗಳಾದರೆ, ಕುಷ್ಟಗಿ, ಕಾರಟಗಿ ಪುರಸಭೆ ಸ್ಥಾನಮಾನ ಹೊಂದಿವೆ. ಉಳಿದಂತೆ ಕನಕಗಿರಿ, ಕುಕನೂರು, ಯಲಬುರ್ಗಾ, ತಾವರಗೇರಾ, ಭಾಗ್ಯನಗರ ಪಟ್ಟಣ ಪಂಚಾಯಿತಿಗಳಾಗಿ ಕಾರ್ಯನಿರ್ವಹಿಸುತ್ತಿವೆ. ದಿನ ಕಳೆದಂತೆ ಜನಸಂಖ್ಯೆ ಬೆಳವಣಿಗೆ ಜತೆಗೆ ನಗರ ವಾಸಿಗಳ ಪ್ರಮಾಣವೂ ಅಧಿಕವಾಗುತ್ತಿದೆ. ಹೊಸ ಬಡಾವಣೆ, ನಿವೇಶನಗಳ ರಚನೆ ಗ್ರಾಮ ಗಡಿ ಮೀರಿ ವಿಸ್ತರಿಸುತ್ತಿದೆ.