ಪಿಡಿಒ ಜ್ಯೋತಿ ರೆಡ್ಡೆರ್‌ಮಾತನಾಡಿ, ಆರ್.ಒ ಪ್ಲಾಂಟ್‌ಗಳನ್ನು ಆರ್.ಡಬ್ಲು. ಎಸ್ ಇಲಾಖೆ, ಗ್ರಾಮ ಪಂಚಾಯಿತಿ ಸುಪರ್ದಿಗೆ ನೀಡಿಲ್ಲ. ಅವುಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದ್ದು, ಶೀಘ್ರ ನೀರಿನ ಸಮಸ್ಯೆ ಪರಿಹಾರ ಮಾಡಲಾಗುವುದು. ಮೋಟರ್ ಕೆಟ್ಟಿರುವ ವೇಳೆ ನೀರು ಪೂರೈಕೆ ವ್ಯತ್ಯಯವಾಗಿರಬಹುದು. ಜನಸಂಖ್ಯೆ ಹೆಚ್ಚಿರುವ ಕಾರಣ ಹಾಗೂ ಬೇಸಿಗೆ ಇರುವುದರಿಂದ ಮೂರು ದಿನಗಳಿಗೊಮ್ಮೆ ನೀರು ಬಿಡಲಾಗುತ್ತದೆ. ಸಾರ್ವಜನಿಕರು ಮಿತವಾಗಿ ನೀರು ಬಳಕೆ ಮಾಡಬೇಕು ಎಂದರು.