ಆರೋಗ್ಯ-ನೇತ್ರ ತಪಾಸಣೆ ಉಚಿತ ಶಿಬಿರ

ಗಂಗಾವತಿ ತಾಲೂಕಿನ ಶ್ರೀರಾಮನಗರದ ಎಕೆಆರ್‌ಡಿ ಪದವಿ ಕಾಲೇಜು ಆವರಣದಲ್ಲಿ ಲಯನ್ಸ್‌ಕ್ಲಬ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಕಣ್ಣುಗಳನ್ನು ತಪಾಸಿಸಲಾಯಿತು. ಕ್ಲಬ್ ತಾಲೂಕಾಧ್ಯಕ್ಷ ಡಾ.ಜಿ.ಚಂದ್ರಪ್ಪ, ಪದಾಧಿಕಾರಿಗಳಾದ ಡಾ.ಅನಿತಾ, ಡಾ.ಕೆ.ಜೆ. ಸಿಂಧೂ ಇತರರಿದ್ದರು.

Published on
ಗಂಗಾವತಿ: ಶ್ರೀರಾಮನಗರದ ಎಕೆಆರ್‌ಡಿ ಪದವಿ ಕಾಲೇಜು ಆವರಣದಲ್ಲಿ ಲಯನ್ಸ್ ಕ್ಲಬ್ ತಾಲೂಕು ಘಟಕದಿಂದ ಆರೋಗ್ಯ ಮತ್ತು ಕಣ್ಣು ತಪಾಸಣೆ ಉಚಿತ ಶಿಬಿರ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಭಾರತೀಯ ವೈದ್ಯಕೀಯ ಸಂಘ, ಸ್ವಾಮಿ ವಿವೇಕಾನಂದ ಸೇವಾ ಸಂಘ ಮತ್ತು ಎ.ಕನಕರತ್ನಾದೇವಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರ ಕಣ್ಣುಗಳ ತಪಾಸಣೆ ಜತೆಗೆ ಶಸ ಚಿಕಿತ್ಸೆಗೆ ಶಿಾರಸು ಮಾಡಲಾಯಿತು. ಇದೇ ಸಂದರ್ಭದಲ್ಲಿ ಹೃದಯ, ಎಲುಬು, ಕೀಲು, ಮಧುಮೇಹ ರೋಗ ತಪಾಸಿಸಿ ಉಚಿತ ಔಷಧ ವಿತರಿಸಲಾಯಿತು. ಶಿಬಿರ ಕುರಿತು ಕ್ಲಬ್ ಬೆಂಗಳೂರು ವಿಜಯನಗರ ಘಟಕದ ಅಧ್ಯಕ್ಷ ಗಂಗಾಧರರಾವ್ ಮಾತನಾಡಿದರು.
ತಾಲೂಕಾಧ್ಯಕ್ಷ ಜಿ.ದೇವರಾಜ ಚಂದ್ರಪ್ಪ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಡಾ.ಮಲ್ಲನಗೌಡ, ಡಾ.ನಾಗರಾಜ ಲೋಕರೆ, ಡಾ.ಅರವಿಂದ, ಡಾ.ಅನಿತಾ, ಡಾ.ಕೆ.ಜೆ. ಸಿಂಧೂ, ಎಂ.ಎನ್.ಶಂಕರಗೌಡ, ಅವಿನಾಶ ವಸಿಷ್ಠ, ಜಿ.ರಾಮಕೃಷ್ಣ, ಸುಬ್ರಮಣ್ಯೇಶ್ವರರಾವ್, ಬಿ.ಬಸವರಾಜ, ಹೊಸಳ್ಳಿ ಶಂಕರ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net