ಅಪ್ರಾಪ್ತೆಗೆ ಮದುವೆ ನಾಲ್ವರಿಗೆ ಜೈಲು ಶಿಕ್ಷೆ

ಅಪ್ರಾಪ್ತೆಗೆ ಮದುವೆ ನಾಲ್ವರಿಗೆ ಜೈಲು ಶಿಕ್ಷೆ (ಸಾಂದರ್ಭಿಕ ಚಿತ್ರ)
ಅಪ್ರಾಪ್ತೆಗೆ ಮದುವೆ ನಾಲ್ವರಿಗೆ ಜೈಲು ಶಿಕ್ಷೆ (ಸಾಂದರ್ಭಿಕ ಚಿತ್ರ)
Published on
ಗಂಗಾವತಿ: ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಜಂಗಮರಕಲ್ಗುಡಿಯ ನಾಲ್ವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ತಲಾ 10ಸಾವಿರ ರೂ. ದಂಡ ವಿಧಿಸಿ ಜೆಎಂಎ್ಸಿ ಪ್ರಧಾನ ಸಿವಿಲ್ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
2018ರಲ್ಲಿ ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ಮದುವೆ ಮಾಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅಂದಿನ ಗ್ರಾಮೀಣ ಪಿಐ ಪ್ರಕಾಶ ಮಾಳೆ ಪ್ರಕರಣ ದಾಖಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮದುವೆ ಮಾಡಿಕೊಳ್ಳಲೆತ್ನಿಸಿದ ಗುಡದಪ್ಪ, ಆತನ ಪಾಲಕರಾದ ಮರಿಯಪ್ಪ, ಹುಲಿಗೆಮ್ಮ ಮತ್ತು ಬಾಲಕಿ ತಾಯಿ ಚನ್ನಮ್ಮಳಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ದೇವಯ್ಯಸ್ವಾಮಿ ಹಿರೇಮಠ ವಾದಿಸಿದ್ದರು.

ಹುಲಿಗಿಯಲ್ಲಿ 800 ಗ್ರಾಂ ಗಾಂಜಾ ವಶ


ಮುನಿರಾಬಾದ್: ಸಮೀಪದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಹಿಂಭಾಗದ ತುಂಗಭದ್ರಾ ನದಿ ದಡದಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಹುಲಿಗೆಮ್ಮ ದೇವಿ ದೇವಸ್ಥಾನ ಆಡಳಿತಾಧಿಕಾರಿ ಪ್ರಕಾಶ್ ರಾವ್ ಹಾಗೂ ಮುನಿರಾಬಾದ್ ಪೊಲೀಸ್ ಉಪನಿರೀಕ್ಷಕ ಅಮರೇಗೌಡ ಅವರು ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿ 800 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಬಿಳಗಿಯ ಮಲ್ಲಿಕ್‌ಸಾಬ್ ಮತ್ತು ಹುಬ್ಬಳ್ಳಿ ಮೂಲದ ಅರ್ಬಾಜ್ ಅಲ್ತಾಫ್ ಅತ್ತರ್ ಎಂದು ಗುರುತಿಸಲಾಗಿದೆ. ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net