ಗ್ರಾಮ-ನಗರ ಅಭಿವೃದ್ಧಿಗೆ ಯೋಜನೆ ರೂಪಿಸಿ

ಕೊಪ್ಪಳದಲ್ಲಿ ಸೋಮವಾರ ಶಾಸಕ ರಾವೇಂದ್ರ ಹಿಟ್ನಾಳ ಅಧ್ಯಕ್ಷತೆಯಲ್ಲಿ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ತಾಪಂ ಇಒ ದುಂಡಪ್ಪ ತುರಾದಿ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ರಾಮಣ್ಣ ಕಲ್ಲನವರ, ಬಿಇಒ ಹನಮಂತಪ್ಪ, ತಾಪಂ ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್​ ಇದ್ದರು.
ಕೊಪ್ಪಳದಲ್ಲಿ ಸೋಮವಾರ ಶಾಸಕ ರಾವೇಂದ್ರ ಹಿಟ್ನಾಳ ಅಧ್ಯಕ್ಷತೆಯಲ್ಲಿ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ತಾಪಂ ಇಒ ದುಂಡಪ್ಪ ತುರಾದಿ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ರಾಮಣ್ಣ ಕಲ್ಲನವರ, ಬಿಇಒ ಹನಮಂತಪ್ಪ, ತಾಪಂ ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಘವೇಂದ್ರ ಹಿಟ್ನಾಳ ಸೂಚನೆ
  • ಕೊಪ್ಪಳ ತಾಪಂ ಅಭಿವೃದ್ಧಿ ಸಮಿತಿ ಸಭೆ
ಕೊಪ್ಪಳ: ಕೇಂದ್ರ-ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಯೋಜನೆ ಒಳಗೊಂಡು ನಗರ, ಗ್ರಾಮೀಣ ಭಾಗ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವಂತೆ ಶಾಸಕ ರಾಘವೇಂದ್ರ ಹಿಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ವಾರ್ಡ್​ ಮತ್ತು ಗ್ರಾಮ ಸಭೆಗಳು ಗ್ರಾಮ ಸ್ವರಾಜ್​ ಕಲ್ಪನೆಯ ಪ್ರಮುಖ ಅಂಶ. ಅಧಿಕಾರಿಗಳು ಗ್ರಾಮ ಅಭಿವೃದ್ಧಿಗೆ ಬೇಕಾದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳಿ. ಗ್ರಾಮ ಸಭೆಗಳಲ್ಲಿ ವ್ಯಕ್ತವಾದ ಕಾಮಗಾರಿಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ. ತಾಲೂಕು ಸಮಿತಿ ಸಭೆಯಲ್ಲಿ ವಿಸತವಾಗಿ ಪರಾಮರ್ಶಿಸಿ. ಜನರಿಗೆ ಏನು ಬೇಕೆಂಬುದನ್ನು ಅರಿಯಿರಿ. ಕಾಮಗಾರಿ ಕೈಗೊಂಡಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಿರಬೇಕು. 2026&27ನೇ ಸಾಲಿಗೆ 468 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಪ್ರಸ್ತಾವನೆ ತಯಾರಿಸಲಾಗಿದೆ. ಚರ್ಚಿಸಿ ಆದ್ಯತಿಕರಿಸಿ ಜಿಲ್ಲಾ ಸಮಿತಿಗೆ ಅನುಮೋದನೆಗೆ ಕಳಿಸಲಾಗುವುದೆಂದರು.
ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಗ್ರಾಮೀಣ ಮತ್ತು ನಗರದ ಸರ್ವತೋಮುಖ ಅಭಿವೃದ್ಧಿಗೆ ಅಭಿವೃದ್ಧಿ ಸಮಿತಿ ನೆರವಾಗಿದೆ. ವಿವಿಧ ಇಲಾಖೆಗಳ ಅನುದಾನ ಮತ್ತು ಕೇಂದ್ರ, ರಾಜ್ಯ ಸರ್ಕಾರದ ಅನುದಾನ ಒಳಗೊಂಡುಪ್ರಸ್ತಾವನೆ ಸಿದ್ಧಪಡಿಸಲಾಗಿದೆ. 2026&-27ನೇ ಸಾಲಿನಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುವುದು. ಇದರಿಂದ ತಳಮಟ್ಟದಿಂದ ಯೋಜನೆ ತಯಾರಿಸಲು ಹಾಗೂ ಜನರ ಸಮಸ್ಯೆ ಬಗೆಹರಿಸಲು ಸಹಾಯಕವಾಗಲಿದೆ ಎಂದು ತಿಳಿಸಿದರು.
ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ರಾಮಣ್ಣ ಕಲ್ಲನವರ, ಬಿಇಒ ಹನಮಂತಪ್ಪ, ತಾಪಂ ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್​, ಪಂಚಾಯತ್​ ರಾಜ್​ ಸಹಾಯಕ ನಿರ್ದೇಶಕ ಮಹೇಶ್​, ತಾಲೂಕ ಮಟ್ಟದ ಅಧಿಕಾರಿಗಳು, ಕೊಪ್ಪಳ ನಗರಸಭೆ ಮತ್ತು ಭಾಗ್ಯನಗರ ಪಟ್ಟಣ ಪಂಚಾಯತಿ ಅಧಿಕಾರಿಗಳು, ಆಯ್ದ ಗ್ರಾಮ ಪಂಚಾಯತಗಳ ಅಧ್ಯಕ್ಷರುಗಳು, ಪಿಡಿಒಗಳು ಇತರರಿದ್ದರು.
"

ಅನುಮೋದನೆ ದೊರೆತ ನಂತರ ವಿಳಂಬ ಮಾಡದೇ ಕಾಮಗಾರಿ ಅನುಷ್ಠಾನಿಸಿ. ಯಾವುದೇ ಕಾರಣಕ್ಕೂ ಅನುದಾನ ವಾಪಸ್​ ಹೋಗಬಾರದು. ಒಂದೊಮ್ಮೆ ಅನುದಾನ ವಾಪಸ್​ ಹೋದಲ್ಲಿ ಅಧಿಕಾರಿಗಳನ್ನು ಹೊಣೆಯಾಗಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net