ಮುನಿರಾಬಾದ್ ಆರ್‌ಎಸ್‌ನಲ್ಲಿ ಶ್ರೀ ವಾಸುದೇವ ಬ್ರಾಹ್ಮಣ ಸಮಾಜ ಹಾಗೂ ರುಕ್ಕಿಣಿ ಭಜನಾ ಮಂಡಳಿ ಸಂಘದಿಂದ ಸಭೆ ನಡೆಯಿತು. ಸಮಾಜದ ಅಧ್ಯಕ್ಷ ವೆಂಕಟೇಶ, ಉಪಾಧ್ಯಕ್ಷ ಅರವಿಂದ ಪೂಜಾರ, ಕಾರ್ಯದರ್ಶಿ ನಾರಾಯಣ ಉಡುಪಿ, ಖಜಾಂಚಿ ವಾದಿರಾಜ ತೆಲಗಿ, ಶ್ರೀನಿವಾಸ ಪಾಟೀಲ, ಪ್ರಾಣೇಶ ಆಚಾರ, ಆನಂದ ತೆಲಗಿ ಇತರರಿದ್ದರು.
ಮುನಿರಾಬಾದ್: ಇಲ್ಲಿನ ಮುನಿರಾಬಾದ್ ಆರ್‌ಎಸ್‌ನಲ್ಲಿ ಶ್ರೀ ವಾಸುದೇವ ಬ್ರಾಹ್ಮಣ ಸಮಾಜ ಹಾಗೂ ರುಕ್ಕಿಣಿ ಭಜನಾ ಮಂಡಳಿ ಸಂಘಗಳನ್ನು ಸ್ಥಾಪಿಸಿ ಸಾಂಕೇತಿಕವಾಗಿ ಉದ್ಘಾಟಿಸಲಾಯಿತು.
ಸಮಾಜದ ಪ್ರಮುಖ ಟಿ.ಲಕ್ಷ್ಮಣ್ ರಾವ್ ಮಾತನಾಡಿ, ಸಮುದಾಯ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಮತ್ತು ಅಭಿವೃದ್ಧಿಗಾಗಿ ನಾವೆಲ್ಲರೂ ಬ್ರಾಹ್ಮಣ ಸಂಘ ಮಾಡಬೇಕು ಎಂದು ಬಹುದಿನದಿಂದ ಚರ್ಚಿಸುತ್ತಾ ಬಂದಿದ್ದೇವು. ಅದರ ಫಲವಾಗಿ ಇಂದು ಎರಡು ಸಂಘ ರಚಿಸಿ ಉದ್ಘಾಟಿಸಲಾಗಿದೆ.
ಹುಲಿಗಿಯ ಶುಗರ್ ಫ್ಯಾಕ್ಟರಿ ಗತ ವೈಭವ ಮೆಲುಕು ಹಾಕಿ, ಕಂಪನಿ ಮಾಡಿದ ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ಸ್ಮರಿಸಿದರು. ಸಂಘಕ್ಕೆ ತನು-ಮನ-ಧನವನ್ನು ಕೈಲಾದಷ್ಟು ಅರ್ಪಿಸುವುದಾಗಿ ತಿಳಿಸಿದರು.