ಅರಣ್ಯ ಹಸಿರೀಕರಣಕ್ಕೆ ಆದ್ಯತೆ

ಕುಷ್ಟಗಿ ತಾಲೂಕಿನ ಕಲಕೇರಿ ಸಾಮಾಜಿಕ ಅರಣ್ಯ ಸಸ್ಯೋದ್ಯಮದಲ್ಲಿ ಬೆಳೆಸಿದ ಸಸಿಗಳು.
ಕುಷ್ಟಗಿ ತಾಲೂಕಿನ ಕಲಕೇರಿ ಸಾಮಾಜಿಕ ಅರಣ್ಯ ಸಸ್ಯೋದ್ಯಮದಲ್ಲಿ ಬೆಳೆಸಿದ ಸಸಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಕುಷ್ಟಗಿ ತಾಲೂಕಿನಲ್ಲಿ 31,609 ಸಸಿಗಳ ವಿತರಣೆ ಗುರಿ
  • ನಿಡಶೇಸಿ ಕೆರೆ ಆವರಣದಲ್ಲಿಂದು ವನಮಹೋತ್ಸವ
ಕುಷ್ಟಗಿ: ಮುಂಗಾರು ಹಂಗಾಮಿನಲ್ಲಿ ಆಗಾಗ್ಗೆ ಸುರಿದ ಮಳೆಯಿಂದ ತಾಲೂಕಿನ ಸಾಮಾಜಿಕ ಅರಣ್ಯದ ಹಸೀರಿಕರಣಕ್ಕೆ ಅರಣ್ಯ ಇಲಾಖೆಯಿಂದ ಆದ್ಯತೆ ನೀಡಲಾಗಿದೆ.
ತಾಲೂಕಿನ ಕಲಕೇರಿ ಗ್ರಾಮದ ಸಾಮಾಜಿಕ ಅರಣ್ಯ ಇಲಾಖೆಯಿಂದ ಬೆಳೆಸಲಾದ ಸಸ್ಯೋದ್ಯಮ ಹಚ್ಚ ಹಸಿರಾಗಿ ಹೊರಹೊಮ್ಮಿದೆ. ಈಗಾಗಲೇ ಸಸಿಗಳ ಫೋಷಣೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ತರಹೇವಾರಿ ಸಸಿ ಬೆಳೆಸಲಾಗಿದೆ. ಹುಣಸೆ, ಬೇವು, ಹೊಳಮತ್ತಿ, ಬದಾಮಿ, ಹೊಂಗೆ, ರಕ್ತ ಚಂದನ, ಅಶೋಕ, ಸೀತಾಫಲ ಸೇರದಂತೆ ನಾನಾ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ.
ಹಸಿರುಮಯ: ತಾಲೂಕಿನ ಅರಣ್ಯ ಇಲಾಖೆ ಇಲಾಖೆಯಿಂದ ಕಳೆದ ವರ್ಷವೂ ಮುತುವರ್ಜಿವಹಿಸಿ ಸಸಿಗಳನ್ನು ಬೆಳೆಸಲಾಗಿದೆ. ಈ ಸಲ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದ ಅರಣ್ಯ ಇಲಾಖೆಯಿಂದ ಹೆಚ್ಚಿನ ಸಸಿಗಳನ್ನು ಬೆಳೆಸಲು ಗುರಿ ಹೊಂದಿದ್ದಾರೆ.
ಕುಷ್ಟಗಿ ತಾಲೂಕಿನ ಮಾದಾಪುರ-ಜೆ.ರಾಂಪುರ ರಸ್ತೆಯಲ್ಲಿ ಗಿಡಗಳಿಗೆ ನೀರಾಯಿಸುತ್ತಿರುವುದು.

31,609 ಸಸಿಗಳ ವಿತರಣೆ

ರಸ್ತೆ ಬದಿ, ನೆಡುತೋಪು, ಸರ್ಕಾರಿ ಶಾಲೆ ಆವರಣ, ಸಂಘ-ಸಂಸ್ಥೆ, ನಿಡಶೇಸಿ ಕೆರೆ ಬದಿ, ರೈತರಿಗೆ ವಿತರಣೆ, ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ಸಹಾಯಧನ, ಒಟ್ಟಾರೆ 2026-27ನೇ ಸಾಲಿನಲ್ಲಿ ಸುಮಾರು 31 ಸಾವಿರಕ್ಕೂ ಅಧಿಕ ಸಸಿಗಳನ್ನು ನಾಟಿ ಮಾಡುವ ಯೋಜನೆಯನ್ನು ಇಲಾಖೆ ಹೊಂದಿದೆ. ಈ ಪೈಕಿ ಏಳು ಸಾವಿರ ಸಸಿಗಳನ್ನು ಶಾಲೆ ಹಾಗೂ ಸಾರ್ವಜನಿಕ ಸಂಘ-ಸಂಸ್ಥೆಗಳಿಗೆ ರವಾನಿಸಲಾಗುತ್ತದೆ ಎಂಬ ಮಾಹಿತಿ ಇದೆ.

ಗ್ರಾಮೀಣ ರಸ್ತೆಗಳ ಬದಿ ನಾಟಿ

ತಾಲೂಕಿನ ಮಾದಾಪುರದಿಂದ ಜೆ.ರಾಂಪುರ, ಗುಡದೂರನಿಂದ ರಾಂಪುರ, ಸಾಸ್ವಿಹಾಳು, ಅಡವಿಭಾವಿ, ಕಳಮಳ್ಳಿಯಿಂದ ಕಿಡದೂರು, ನವಲಹಳ್ಳಿಯಿಂದ ಜುಮಲಾಪುರ, ಯರಗೇರಾದಿಂದ ಗೊರೇಬಿಹಾಳ್, ವೆಂಕಟಾಪುರದಿಂದ ಬಾದಿಮನಾಳ, ಹನಮಸಾಗರದಿಂದ ಮುದವಟಗಿ, ಹನಮಗಿರಿ, ತಳುವಗೇರಾ, ಬ್ಯಾಲಿಹಾಳವರೆಗೆ ರಸ್ತೆಬದಿ ಗಿಡಗಳನ್ನು ಬೆಳೆಸಲಾಗುತ್ತಿದ್ದು, ಪೋಷಣೆಗೆ ಸಾರ್ವಜನಿಕರು ಸಹಕರಿಸಬೇಕಿದೆ.
"

ಕುಷ್ಟಗಿ ತಾಲೂಕಿನ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ 31 ಸಾವಿರ ಸಸಿ ಬೆಳೆಸಲಾಗಿದೆ. ವಿಶ್ವ ಪರಿಸರ ದಿನಾಚರಣೆಯ ದಿನದಂದು ನಿಡಶೇಸಿ ಕೆರೆ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಿಮಿತ್ತ 350ಕ್ಕೂ ಗಿಡಗಳು ನಾಟಿ ಮಾಡಲಾಗುವುದು. 7,500 ಸಸಿಗಳು ಸಂಘ-ಸಂಸ್ಥೆ, ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದೆ.

— ಶಿವಕುಮಾರ್ ಜಿ. ಸಾಮಾಜಿಕ ವಲಯ ಅರಣ್ಯಾಧಿಕಾರಿ, ಕುಷ್ಟಗಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net