ಮತದಾನ ಹಕ್ಕಿನಿಂದ ವಂಚಿತರಾಗದಿರಿ

ಕುಕನೂರು ಪಪಂ ಕಚೇರಿ ಎದುರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನಕ್ಕೆ ತಹಸೀಲ್ದಾರ್ ಬಸವರಾಜ ಬಣ್ಣೆಶಿರೂರ ಮಂಗಳವಾರ ಚಾಲನೆ ನೀಡಿದರು. ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್, ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಮುಖ್ಯಾಧಿಕಾರಿ ನಾಗೇಶ್, ಆಹಾರ ಇಲಾಖೆ ಉಪ ನಿರ್ದೇಶಕ ವಿಶ್ವನಾಥಗೌಡ್ರ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಬಸವರಾಜ ಬಣ್ಣೆಶಿರೂರ ಮನವಿ
ಕುಕನೂರು: ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂದು ತಹಸೀಲ್ದಾರ್ ಬಸವರಾಜ ಬಣ್ಣೆಶಿರೂರ ಹೇಳಿದರು.
ಪಟ್ಟಣದ ಪಪಂ ಕಚೇರಿ ಎದುರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. 18 ವರ್ಷ ತುಂಬಿದವರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ, ಇತ್ತೀಚಿನ ಭಾವಚಿತ್ರ ಸೇರಿಸಲು ಅವಕಾಶವಿದೆ. ಜು.29ರವರೆಗೆ ಈ ಅಭಿಯಾನ ನಡೆಯಲಿದೆ. ಬಿಎಲ್‌ಒಗಳು ತಮ್ಮ ಮನೆಗೆ ಭೇಟಿ ನೀಡಿದಾಗ ಅಗತ್ಯ ಮಾಹಿತಿ ಕೊಟ್ಟು ಸಹಕಾರ ನೀಡಬೇಕು ಎಂದರು.
ತಾಪಂ ಇಒ ಸಂತೋಷ ಬಿರಾದಾರ ಪಾಟೀಲ್ ಮಾತನಾಡಿ, ವಿಶೇಷವಾಗಿ ಎಲ್ಲ ಗ್ರಾಪಂ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದ ಮತದಾರರು ಅದರ ಸದುಪಯೋಗ ಪಡೆದುಕೊಳ್ಳಬೇಕು. ದೋಷ ರಹಿತ ಮತದಾರರ ಪಟ್ಟಿಯೇ ಸದೃಢ ಪ್ರಜಾಪ್ರಭುತ್ವದ ತಳಪಾಯವಾಗಿದೆ ಎಂದರು.
ಅಭಿಯಾನವು ಪಟ್ಟಣದ ಪಪಂ, ತಾಪಂ, ವೀರಭದ್ರಪ್ಪ ಸರ್ಕಲ್, ಬಸ್ ನಿಲ್ದಾಣ, ಅಂಬೇಡ್ಕರ್ ಸರ್ಕಲ್ ಮೂಲಕ ಸಾಗಿ ವೀರಭದ್ರಪ್ಪ ಸರ್ಕಲ್‌ನಲ್ಲಿ ಸಮಾರೋಪಗೊಂಡಿತು.
ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ ಅವರು ಮತದಾರರ ಪಟ್ಟಿ ಪರಿಷ್ಕರಣೆ ಅರ್ಜಿಯನ್ನು ಭರ್ತಿ ಮಾಡಿದರು. ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಮುಖ್ಯಾಧಿಕಾರಿ ನಾಗೇಶ್, ಆಹಾರ ಇಲಾಖೆ ಉಪ ನಿರ್ದೇಶಕ ವಿಶ್ವನಾಥಗೌಡ್ರ, ಸಿಡಿಪಿಒ ಬೆಟದೇಶ್ ಮಾಳೆಕೊಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜ ಪ್ರಾಚಾರ್ಯ ಈಶಪ್ಪ ಮಳಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net