ಹೋಟೆಲ್​ಗಳ ಮೇಲೆ ಆಹಾರ ಅಧಿಕಾರಿಗಳ ದಾಳಿ

ಕೊಪ್ಪಳದಲ್ಲಿ ವಿವಿಧ ಹೋಟೆಲ್​ಗಳಿಗೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು ವಶ ಪಡೆದ ಆಹಾರ ಪದಾರ್ಥ.
ಕೊಪ್ಪಳದಲ್ಲಿ ವಿವಿಧ ಹೋಟೆಲ್​ಗಳಿಗೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು ವಶ ಪಡೆದ ಆಹಾರ ಪದಾರ್ಥ.
Published on

ಪ್ರಮುಖ ಮುಖ್ಯಾಂಶಗಳು

  • ಮಾಲೀಕರಿಗೆ ನೋಟಿಸ್​ ಜಾರಿ

ಕೊಪ್ಪಳ: ನಗರದಲ್ಲಿ ಗುರುವಾರ ಹೋಟೆಲ್​ಗಳ ಮೇಲೆ ಧಿಡೀರ್​ ದಾಳಿ ನಡೆಸಿದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಅಸುರತ ಆಹಾರ ಪದಾರ್ಥ ವಶಕ್ಕೆ ಪಡೆದು ನೋಟಿಸ್​ ಜಾರಿಗೊಳಿಸಿದರು.

ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಬೆಳಗ್ಗೆಯೇ ಅಧಿಕಾರಿಗಳ ಸಭೆ ನಡೆಸಿ ಕ್ರಮಕ್ಕೆ ಸೂಚಿಸಿದರು. ಈ ಬೆನ್ನೆಲ್ಲೇ ಕಾರ್ಯಾಚರಣೆಗೆ ಇಳಿದ ಅಧಿಕಾರಿಗಳು ನಗರದ ಪ್ರತಿಷ್ಠಿತ ಪ್ರಮುಖ ಹೋಟೆಲ್​ಗಳಿಗೆ ತೆರಳಿ ತಪಾಸಣೆ ನಡೆಸಿದರು. ಮಾಲತೇಶ, ಅಕ್ಷಯ, ಉಡುಪಿ ಉಪಾಹಾರ, ಸಂಧ್ಯಾ ರೆಸ್ಟೋರೆಂಟ್​, ಶೋಭಾಸ್​, ಜೆಕೆಎಸ್​, ಹಂಪಿ ಎಕ್ಸಪ್ರೆಸ್​ ಹೋಟೆಲ್​ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆಹಾರ ಪದಾರ್ಥ, ಬಳಸುವ ವಸ್ತುಗಳು, ಪ್ರಮಾಣಿತ ಗುಣಮಟ್ಟ, ಸುರಕ್ಷತೆ, ಸ್ವಚ್ಛತೆ, ಅಡುಗೆ ಮನೆ ನಿರ್ವಹಣೆ ಇತ್ಯಾದಿ ಅಂಶಗಳನ್ನು ಗಮನಿಸಿದರು.
ಈ ವೇಳೆ ಕೆಲವೆಡೆ ಅಸುರತ ಆಹಾರ ಪದಾರ್ಥ, ಲೇಬಲ್​ ಇಲ್ಲದ ಆಹಾರ, ಚಿಕನ್​, ಮಟನ್​, ಅವಧಿ ಮುಗಿದ ಪದಾರ್ಥಗಳು ಕಂಡುಬಂದಿವೆ. 14 ಕೆಜಿ ಚಿಕನ್​, 2 ಕೆಜಿ ಮೀನು, 8 ಕೆಜಿ ಪನ್ನೀರ್​, ಮೀರಿಂಡಾ, ಪೆಪ್ಸಿ, 36ಬಾಟಲ್​ ಸೆವೆಲ್​ಅಪ್​, 4 ಪ್ಯಾಕೆಟ್​ ಬ್ರೂ ಕಾಫಿ ಪುಡಿ, 800 ಎಂಎಲ್​ ಸಲಾಡ್​ ಎಣ್ಣೆ, 3 ಕೆಜಿ ಗೋಬಿ, 1 ಕೆಜಿ ಫಿಜ್ಜಾ ಬ್ರೇಡ್​, 4 ಕೆಜಿ ಉಪ್ಪಿನಕಾಯಿ ವಶಪಡಿಸಿಕೊಳ್ಳಲಾಯಿತು. ಕೂಡಲೇ ಎಲ್ಲ ಆಹಾರ ಮಾದರಿಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಯಿತು. ದಾಳಿ ನಡೆಸಿದ ಹೋಟೆಲ್​ಗಳಿಗೆ ನೋಟಿಸ್​ ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net