ಜೀವ ರಕ್ಷಣೆಗೆ ಸಂಚಾರಿ ನಿಯಮ ಪಾಲಿಸಿ : ಡಾ. ಬಸವರಾಜ್​

ನಗರದ ಕೆ.ಎಸ್​. ಆಸ್ಪತ್ರಯಲ್ಲಿ ಶನಿವಾರ ಆಯೋಜಿಸಿದ ರಸ್ತೆ ಸುರಕ್ಷತಾ ಪ್ರಬಂಧ ಸ್ಪರ್ಧೆಯಲ್ಲಿ ಶಾಲಾ&ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಬರೆಯುತ್ತಿರುವುದ.
ನಗರದ ಕೆ.ಎಸ್​. ಆಸ್ಪತ್ರಯಲ್ಲಿ ಶನಿವಾರ ಆಯೋಜಿಸಿದ ರಸ್ತೆ ಸುರಕ್ಷತಾ ಪ್ರಬಂಧ ಸ್ಪರ್ಧೆಯಲ್ಲಿ ಶಾಲಾ&ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಬರೆಯುತ್ತಿರುವುದ.
Published on

ಪ್ರಮುಖ ಮುಖ್ಯಾಂಶಗಳು

  • ಜೀವ ರಕ್ಷಣೆಗೆ ಸಂಚಾರಿ ನಿಯಮ ಪಾಲಿಸಿ
  • ರಸ್ತೆ ಸುರಕ್ಷತಾ ಪ್ರಬಂಧ ಸ್ಪರ್ಧೆ
ಕೊಪ್ಪಳ: ರಸ್ತೆ ನಿಯಮಗಳನ್ನು ದಂಡಕ್ಕೆ ಹೆದರಿ ಪಾಲೀಸದೆ. ನಿಮ್ಮ ಹಾಗೂ ಇತರರ ಜೀವ ರಕ್ಷಣೆಗಾಗಿ ಜವಾಬ್ದಾರಿಯಿಂದ ಪಾಲಿಸಿ, ಎಂದು ಕೊಪ್ಪಳ ಕೆ.ಎಸ್​. ಆಸ್ಪತ್ರೆಯ ಮುಖ್ಯಸ್ಥ ಡಾ. ಬಸವರಾಜ್​ ಎಸ್​. ಕ್ಯಾವಟರ್​ ಸೂಚಿಸಿದರು.
ನಗರದ ಕೆ.ಎಸ್​. ಆಸ್ಪತ್ರೆಯಲ್ಲಿ ಶನಿವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ರಸ್ತೆ ಸುರಕ್ಷತೆ ವಿಷಯದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸ್ಪರ್ಧೆಯಲ್ಲಿ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. ರಸ್ತೆ ಸುರಕ್ಷತೆಯ ಮಹತ್ವ, ಸಂಚಾರಿ ನಿಯಮಗಳ ಅಗತ್ಯತೆ ಮತ್ತು ಅಪಘಾತಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಪರ್ಧಿಗಳು ತಮ್ಮ ಪ್ರಬಂಧಗಳ ಮೂಲಕ ಅರ್ಥಪೂರ್ಣವಾಗಿ ವಿಚಾರ ಮಂಡಿಸಿದರು. ಯುವ ಪೀಳಿಗೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಕುರಿತು ಜಾಗೃತಿ ಮೂಡಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಕೆ.ಎಸ್​. ಆಸ್ಪತ್ರೆಯು ಕೇವಲ ಪ್ರಬಂಧ ಸ್ಪರ್ಧೆಗೆ ಸೀಮಿತವಾಗದೆ. ಮುಂದಿನ ದಿನಗಳಲ್ಲಿ ಬೀದಿ ನಾಟಕ ಮತ್ತು ಬೈಕ್​ ರ್ಯಾಲಿ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಹಾಗೂ ಉಚಿತ ಹೆಲ್ಮೆಟ್​ ವಿತರಣೆಯಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಜ್ಜಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ಶಿಕ್ಷಕರು, ಪೋಷಕರು, ಆಸ್ಪತ್ರೆಯ ವೈದ್ಯಕಿಯ ತಂಡ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net