ಹಿರಿಯರನ್ನು ಗೌರವಿಸುವ ಸನ್ಮಾರ್ಗ ಅನುಸರಿಸಿ

ಕುಕನೂರು ತಾಲೂಕಿನ ನೆಲಜೇರಿ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಗ್ರಾಮ ಹಿರಿಯ ನಾಗರಿಕರ ದಿನಕ್ಕೆ ಕೇಕ್ ಕತ್ತಿರುವ ಮೂಲಕ ಚಾಲನೆ ನೀಡಲಾಯಿತು. ಗ್ರಾಪಂ ಕಾರ್ಯದರ್ಶಿ ಫಕೀರಪ್ಪ ಮೂಲಿಮನಿ, ಗ್ರಂಥಾಲಯ ಮೇಲ್ವಿಚಾರಕ ದೇವರಾಜ್ ಮ್ಯಾದನೇರಿ, ಕರವಸೂಲಿಗಾರ ಯಮನೂರಪ್ಪ ವಾಲ್ಮೀಕಿ, ಕಂಪ್ಯೂಟರ್ ಆಪರೇಟರ್ ಮಂಜುಳಾ ಉಸಗಲಿ, ಕಾಯಕ ಮಿತ್ರ ಲಲಿತಾ ಹೊಸೂರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಪಂ ಕಾರ್ಯದರ್ಶಿ ಫಕೀರಪ್ಪ ಮೂಲಿಮನಿ ಹೇಳಿಕೆ
  • ಹಿರಿಯ ನಾಗರಿಕರ ದಿನ
ಕುಕನೂರು: ಪ್ರತಿಯೊಬ್ಬರೂ ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಗ್ರಾಪಂ ಕಾರ್ಯದರ್ಶಿ ಫಕೀರಪ್ಪ ಮೂಲಿಮನಿ ಹೇಳಿದರು.
ತಾಲೂಕಿನ ನೆಲಜೇರಿ ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರದಲ್ಲಿ ಕಲಿಕಾ ಟಾಟಾ ಟ್ರಸ್ಟ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ಹಿರಿಯ ನಾಗರಿಕರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಹಿರಿಯರನ್ನು ಗೌರವಿಸುವುದು ಪೂರ್ವಜರ ಕಾಲದಿಂದಲೂ ರೂಢಿಯಲ್ಲಿದೆ. ಹಿರಿಯರ ಮಾರ್ಗದರ್ಶನೊಂದಿಗೆ ಮುನ್ನಡೆಯಬೇಕು. ಇಂದು ಪಾಲಕರನ್ನು ಪೂಜ್ಯಭಾವದಿಂದ ಕಾಣವುದು ಅಪರೂಪವಾಗಿದೆ. ಆದ್ದರಿಂದ ಹಿರಿಯರನ್ನು ಗೌರವಿಸುವ ಸನ್ಮಾರ್ಗ ಅನುಸರಿಸಿ ಎಂದರು.
ಗ್ರಂಥಾಲಯ ಮೇಲ್ವಿಚಾರಕ ದೇವರಾಜ್ ಮ್ಯಾದನೇರಿ ಮಾತನಾಡಿ, ಪೂರ್ವಜರ ಕಾಲದಿಂದ ಇರುವ ಹಿರಿಯರನ್ನು ಗೌರವಿಸುವ ಪರಂಪರೆ ಉಳಿಸಿಕೊಳ್ಳುವ ಜತೆಗೆ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಗ್ರಾಪಂ ಕರವಸೂಲಿಗಾರ ಯಮನೂರಪ್ಪ ವಾಲ್ಮೀಕಿ, ಕಂಪ್ಯೂಟರ್ ಆಪರೇಟರ್ ಮಂಜುಳಾ ಉಸಗಲಿ, ಕಾಯಕ ಮಿತ್ರ ಲಲಿತಾ ಹೊಸೂರು, ಗ್ರಾಮ ಹಿರಿಯರ ಕೇಂದ್ರದ ಪೇರಕಿ ಅಮೃತಾ ಡಿ.ಭಾವಿಕಟ್ಟಿ, ಪ್ರಮುಖರಾದ ಅಂದಾನಪ್ಪ ಕಲ್ಲಭಾವಿ, ಶಂಕ್ರಪ್ಪ ಕುರಿ, ಆನಂದಸ್ವಾಮಿ, ಬಸಮ್ಮ ಭಾವಿಕಟ್ಟಿ, ಅನಸೂಯಾ ಹನಮನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net