ಓದಿನತ್ತ ಗಮನಹರಿಸಿ ಉಜ್ವಲ ಜೀವನ ಕಟ್ಟಿಕೊಳ್ಳಿ

ಕನಕಗಿರಿಯ ಕೆಪಿಎಸ್ (ಕಾಲೇಜು ವಿಭಾಗ)ದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ಕ್ರೀಡೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಉದ್ಘಾಟಿಸಿದರು. ಉಪನ್ಯಾಸಕ ಶಿವಪುತ್ರಪ್ಪ ಗಳಪೂಜಿ, ಅತಿಥಿ ಉಪನ್ಯಾಸಕರಾದ ಹನುಮೇಶ ಗೌಡ್ರ, ಶಿವಶರಣಪ್ಪ ಗದ್ದಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ಪಿ.ಆದಪ್ಪ ಸಲಹೆ
  • ಸ್ವಾಗತ ಕಾರ್ಯಕ್ರಮ
ಕನಕಗಿರಿ: ವಿದ್ಯಾರ್ಥಿಗಳು ಮೊಬೈಲ್‌ಗೆ ಅಂಟಿಕೊಳ್ಳದೇ, ಸದಾ ಕ್ರೀಯಾಶೀಲರನ್ನಾಗಿಸಲು ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕೇಸರಹಟ್ಟಿಯ ಸರ್ಕಾರಿ ಪ ಪೂ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಪಿ.ಆದಪ್ಪ ಹೇಳಿದರು.
ಕೆಪಿಎಸ್ (ಕಾಲೇಜು ವಿಭಾಗ)ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಾರ್ಷಿಕ ಕ್ರೀಡೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಡ ಕುಟುಂಬದಲ್ಲಿ ಜನಿಸಿದ ಎಪಿಜೆ ಅಬ್ದುಲ್ ಕಲಾಂ ಶ್ರಮ ವಹಿಸಿ ವಿಜ್ಞಾನಿಯಾದರು. ದೇಶದ ರಾಷ್ಟ್ರಪತಿಗಳಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಆದರೆ, ಈಗಿನ ವಿದ್ಯಾರ್ಥಿಗಳು ಮೊಬೈಲ್‌ನಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳು ಇದರಿಂದ ದೂರವಿದ್ದು, ತಮ್ಮ ಜೀವನ ಉಜ್ವಲವಾಗಿಸಿಕೊಳ್ಳುವ ನಿಟ್ಟಿನಲ್ಲಿ ಓದಿನತ್ತ ಗಮನ ಹರಿಸಬೇಕು ಎಂದರು. ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರಗೌಡ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತಲೇ ಹಲವು ಪ್ರತಿಭೆಗಳಿದ್ದು, ಅವರನ್ನೇ ಪ್ರೇರಣೆಯನ್ನಾಗಿಸಿಕೊಂಡು ಉನ್ನತ ಶಿಕ್ಷಣ ಪಡೆದು ಸಾಧಿಸಿ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಉಪನ್ಯಾಸಕರಾದ ಶಿವಪುತ್ರಪ್ಪ ಗಳಪೂಜಿ, ರೇಖಾ ಚಕ್ರಸಾಲಿ, ಪಂಪಾರೆಡ್ಡಿ ಗಚ್ಚಿನಮನಿ, ಅತಿಥಿ ಉಪನ್ಯಾಸಕರಾದ ಹನುಮೇಶ ಗೌಡ್ರ, ಶಿವಶರಣಪ್ಪ ಗದ್ದಿ, ಸಂಗೀತಾ, ವಸಂತ, ಹನುಮಂತ, ಹನುಮೇಶ ದೇಸಾಯಿ, ಹೊನ್ನೂರಪ್ಪ, ಮಹೇಶ, ಖೈರುನ್ನೀಸಾ, ವಿಜಯಲಕ್ಷ್ಮೀ, ಶಾಂತಾ, ಕಿರಣ್, ಮಂಜುನಾಥ, ಶಂಕರಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net