ಮಹಿಳಾ ಕಾಂಗ್ರೆಸ್​ ಬಲವರ್ಧನೆಗೆ ಗಮನಹರಿಸಿ

ಕೊಪ್ಪಳ ಜಿಲ್ಲಾ ಕಾಂಗ್ರೆಸ್​ ಕಾರ್ಯಾಲಯದಲ್ಲಿ ಜಿಲ್ಲಾಮಟ್ಟದ ಮಹಿಳಾ ಕಾಂಗ್ರೆಸ್​ ಕಾರ್ಯಕರಿ ಸಭೆ ಜರುಗಿತು. ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ, ಏಳು ತಾಲೂಕುಗಳ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ರೇಷ್ಮಾ ಖಾಜಾವಲಿ, ಗಂಗಮ್ಮ ಚಿಕೆನಕೊಪ್ಪ, ಸೌಮ್ಯ ಕಂದಗಲ್​, ಸಾವಿತ್ರಿ ಗೊಲ್ಲರ, ಶಕುಂತಲಾ ಹಿರೇಮಠ, ಗೋವರ್ಧನಮ್ಮ, ಪ್ರಮಿಳಾ ಇದ್ದರು.
ಕೊಪ್ಪಳ ಜಿಲ್ಲಾ ಕಾಂಗ್ರೆಸ್​ ಕಾರ್ಯಾಲಯದಲ್ಲಿ ಜಿಲ್ಲಾಮಟ್ಟದ ಮಹಿಳಾ ಕಾಂಗ್ರೆಸ್​ ಕಾರ್ಯಕರಿ ಸಭೆ ಜರುಗಿತು. ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ, ಏಳು ತಾಲೂಕುಗಳ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ರೇಷ್ಮಾ ಖಾಜಾವಲಿ, ಗಂಗಮ್ಮ ಚಿಕೆನಕೊಪ್ಪ, ಸೌಮ್ಯ ಕಂದಗಲ್​, ಸಾವಿತ್ರಿ ಗೊಲ್ಲರ, ಶಕುಂತಲಾ ಹಿರೇಮಠ, ಗೋವರ್ಧನಮ್ಮ, ಪ್ರಮಿಳಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜ್ಯೋತಿ ಎಂ. ಗೊಂಡಬಾಳ ಹೇಳಿದರು.
ಕೊಪ್ಪಳ : ಕಾಂಗ್ರೆಸ್​ ಸರಕಾರದ ಮಹಿಳಾಪರ ಯೋಜನೆ ಪ್ರಚಾರ ಮಾಡಿ ಅರ್ಹರಿಗೆ ತಲುಪಿಸುವುದರ ಜತೆಗೆ ಮಹಿಳಾ ಕಾಂಗ್ರೆಸ್​ ಬಲವರ್ಧನೆ ಕಡೆಗೆ ಹೆಚ್ಚಿನ ಗಮನಹರಿಸಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್​ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡ ಜಿಲ್ಲಾಮಟ್ಟದ ಮಹಿಳಾ ಕಾಂಗ್ರೆಸ್​ ಕಾರ್ಯಕರಿ ಸಭೆಯಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಸಬಲೀಕರಣದಂತೆ ದೌರ್ಜನ್ಯ ಹಾಗೂ ಸಂಕಷ್ಟಕ್ಕೊಳಗಾಗುವ ಮಹಿಳೆಯರಿಗೆ ತುರ್ತು ಸಹಾಯ ಒದಗಿಸಲು ಅಕ್ಕ ಪಡೆ ರಚಿಸಲಾಗಿದೆ, ಉಚಿತ ಬಸ್​ ವ್ಯವಸ್ಥೆ ಶಕ್ತಿಯಂತಹ ಅನೇಕ ಯೋಜನೆ ತಂದ ಸರ್ಕಾರದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಕೇಂದ್ರ ಬಿಜೆಪಿ ಸರಕಾರದ ವೈಫಲ್ಯ ಮತ್ತು ಜನವಿರೋಧಿ ನೀತಿಗಳನ್ನು ಮಹಿಳೆಯರಿಗೆ ತಿಳಿಸಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕೈ ಅಭ್ಯರ್ಥಿಗಳು ಗೆಲ್ಲುವ ಹಾಗೆ ಮಾಡಬೇಕು ಎಂದರು.
ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದ ಮಹಿಳಾ ಕಾಂಗ್ರೆಸ್​ ತರಬೇತಿ ಶಿಬಿರಗಳನ್ನು ನಡೆಸುವುದು ಹಾಗೂ ತಮ್ಮ ಕ್ಷೇತ್ರದ ಶಾಸಕರು ಮಹಿಳಾ ಕಾಂಗ್ರೆಸ್​ಗೆ ಬೆಂಬಲ ಮತ್ತು ಸಹಕಾರ ನೀಡುವಂತೆ ಮನವಿ ಮಾಡಿ ಪತ್ರ ಬರೆಯುವುದಾಗಿ ಹೇಳಿದರು.
ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ ಮಾತನಾಡಿ, ಮಹಿಳಾ ಕಾಂಗ್ರೆಸ್​ ಗೆ ಡಿಸಿಸಿ ಹೆಚ್ಚಿನ ಪ್ರಾಧಾನ್ಯತೆ ಮತ್ತು ಸಹಕಾರ ನೀಡಿ. ಸಮಾನ ಅವಕಾಶ ನೀಡುವಂತೆ ಒತ್ತಾಯಿಸಬೇಕಿದೆ, ಪ್ರಸ್ತುತ ಜಾರಿಯಾಗಿರುವ ಎಸ್​.ಐ.ಆರ್​. ಕುರಿತು ಮಾಹಿತಿ ನೀಡಿ. ಯಾವುದೇ ಕಾರಣಕ್ಕೂ ಎಸ್​.ಐ.ಆರ್​. ಪ್ರಕ್ರಿಯೆಯಿಂದ ದೂರ ಸರಿಯದೇ ಯಾವುದೇ ಮತದಾರನ ಹಕ್ಕು ಹೋಗದಂತೆ ಎಚ್ಚರವಹಿಸಬೇಕು. ಕಾಲಕಾಲಕ್ಕೆ ಮಾಹಿತಿ ಪಡೆದು ತಮ್ಮ ಘಟಕಗಳ ಮೂಲಕ ಜನರಿಗೆ ತಿಳಿಸಬೇಕು, ಕೇಂದ್ರ ಸರಕಾರ ಚುನಾವಣಾ ಆಯೋಗವನ್ನು ಬಳಸಿಕೊಂಡು ಶೋಷಿತರ ಮತದಾನದ ಹಕ್ಕು ಕಸಿಯುವ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲೆಯ ಏಳು ತಾಲೂಕುಗಳ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ರೇಷ್ಮಾ ಖಾಜಾವಲಿ, ಗಂಗಮ್ಮ ಚಿಕೆನಕೊಪ್ಪ, ಸೌಮ್ಯ ಕಂದಗಲ್​, ಸಾವಿತ್ರಿ ಗೊಲ್ಲರ, ಶಕುಂತಲಾ ಹಿರೇಮಠ, ಗೋವರ್ಧನಮ್ಮ, ಪ್ರಮಿಳಾ, ಪ್ರಮುಖರಾದ ವಿಶಾಲಾಕ್ಷಿ ತಾವರಗೇರಾ, ಸುಮಂಗಲಾ ನಾಯಕ್​, ಪದ್ಮಾ ಕಂಬಳಿ, ಗಂಗಮ್ಮ ಯಲಬುರ್ಗಾ, ಮಲ್ಲಮ್ಮ ಗೊಂದಿ, ಮಹಾದೇವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net