ಅಗ್ನಿ ಅವಘಡ ಸುರಕ್ಷತೆ ನಿಯಮ ಪಾಲಿಸಲಿ

 ಕುಷ್ಟಗಿ ಪಟ್ಟಣದ ಗುಮಗೇರಾ ರಸ್ತೆಯಲ್ಲಿರುವ ಸೋಲಾರ್ ಕಂಪನಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಗ್ನಿಶಾಮಕ ಮಾಕ್ ಡ್ರಿಲ್ ಅಣುಕು ಪ್ರದರ್ಶನಗೆ ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಚಾಲನೆ ನೀಡಿದರು. ಸಹಾಯಕ ಅಧಿಕಾರಿ ಅಸ್ಮಾಂ ಪುಣೆಕರ್, ಅಧಿಕಾರಿ ನಾಗಪ್ಪ ಗಂಗನಾಳ್, ಚಾಲಕ ಬಸವರಾಜ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಸಲಹೆ
  • ಕುಷ್ಟಗಿ ಅಗ್ನಿಶಾಮಕ ಅಣುಕು ಪ್ರದರ್ಶನ
ಕುಷ್ಟಗಿ: ಅಗ್ನಿ ಅವಘಡದಿಂದ ರಕ್ಷಿಸಿಕೊಳ್ಳುವ ಉಪಾಯವನ್ನು ಪ್ರತಿಯೊಬ್ಬರೂ ಕಲಿಯಬೇಕು ಎಂದು ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಹೇಳಿದರು.
ಪಟ್ಟಣದ ಗುಮಗೇರಾ ರಸ್ತೆಯಲ್ಲಿರುವ ಸೋಲಾರ್ ಕಂಪನಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಗ್ನಿಶಾಮಕ ಅಣುಕು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಬೆಂಕಿ ಅನಾಹುತ ತಡೆಗಟ್ಟುವ ಮುಂಜಾಗ್ರತ ಕ್ರಮಗಳನ್ನು ಸಾರ್ವಜನಿಕರು ಅರಿಯಬೇಕು. ಅಗ್ನಿ ಅವಘಡ ಜೀವ ಮತ್ತು ಆಸ್ತಿ ನಷ್ಟಕ್ಕೆ ಸುರಕ್ಷತೆ ನಿಯಮ ಪಾಲಿಸಬೇಕು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಅಗ್ನಿಶಾಮಕದಳ ಪ್ರಯೋಜನ ಪಡೆದುಕೊಳ್ಳಬೇಕು. ಏ.14ರಿಂದ 20ರವರಗೆ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಅಗ್ನಿಶಾಮಕ ಸಹಾಯಕ ಅಧಿಕಾರಿ ಅಸ್ಮಾಂ ಪುಣೆಕರ್, ಅಧಿಕಾರಿ ನಾಗಪ್ಪ ಗಂಗನಾಳ್, ಚಾಲಕ ಬಸವರಾಜ್, ಸಿಬ್ಬಂದಿ ಪ್ರವೀಣ್,ಬಸವರಾಜ್ ಹೊರಕೇರಿ, ಮಲ್ಲಿಕಾರ್ಜುನ್, ಪ್ರಮುಖರಾದ ಸಾಗರ್ ಯಾದವ್,ಆನಂದ ಹೊಸ್ಮನಿ, ಆನಂದ ಆರ್.ಕೆ., ಮಹೆಬೂಬ್ ಕಾರಜೋಳ್, ಪರಸಪ್ಪ ಅಳ್ಳಳ್ಳಿ.ಬಸವನಗೌಡ ಪಾಟೀಲ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net