ಖಾಸಗಿ ಕಂಪನಿ-ರೈತರ ನಡುವೆ ಹೊಡೆದಾಟ

ಖಾಸಗಿ ಕಂಪನಿ-ರೈತರ ನಡುವೆ ಹೊಡೆದಾಟ
ಖಾಸಗಿ ಕಂಪನಿ-ರೈತರ ನಡುವೆ ಹೊಡೆದಾಟ
Published on

ಪ್ರಮುಖ ಮುಖ್ಯಾಂಶಗಳು

  • ಬಾಸುಂಡೆ ಬರುವಂತೆ ಹೊಡೆದ ಕಾರ್ಮಿಕರು
ಕೊಪ್ಪಳ: ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದಲ್ಲಿ ವಿದ್ಯತ್​ ಹೈ ಟೆನ್ಶನ್​ ಲೈನ್​ ಅಳವಡಿಕೆ ಸಂಬಂಧ ಬುಧವಾರ ಖಾಸಗಿ ಕಂಪನಿ ಕಾರ್ಮಿಕರು ಹಾಗೂ ರೈತರ ನಡುವೆ ಹೊಡೆದಾಟ ನಡೆದಿದ್ದು, ಹಲವು ರೈತರು ಗಾಯಗೊಂಡಿದ್ದಾರೆ.
ಕಾಮಗಾರಿಗೆ ಬಳಸಿಕೊಂಡ ಜಮೀನಿಗೆ ಪರಿಹಾರ ನೀಡಿಲ್ಲವೆಂದು ರೈತರು ಮಂಳವಾರದಿಂದ ರೈತರು ಅಡ್ಡಿಪಡಿಸಿದ್ದಾರೆ. ಬುಧವಾರವೂ ಕಾಮಗಾರಿ ಮಾಡಲು ಕಾರ್ಮಿಕರು ಬಂದಿದ್ದಾರೆ. ಈ ವೇಳೆ ಪುನ: ಕೃಷಿಕರು ಅಡ್ಡಿಪಡಿಸಿದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ನಂತರ ಕಂಪನಿ ಅಧಿಕಾರಿಗಳು ರೈತರ ಮೇಲೆ ದಾಳಿ ನಡೆಸಿದ್ದಾರೆ. ಮನಬಂದಂತೆ ಥಳಿಸಿದ್ದಾರೆನ್ನಲಾಗಿದೆ. ಹಲವರು ಗಾಯಗೊಂಡಿದ್ದು, ಕುಷ್ಟಗಿ ತಾಲೂಕು ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಪಿಎಸ್​ಐ ಹನುಮಂತಪ್ಪ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಜಗಳ ನಿಯಂತ್ರಿಸಿದ್ದಾರೆ. ಟನೆ ಸಂಬಂಧ 18 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net