ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ

ಹನುಮಸಾಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಯೋಜನಾಧಿಕಾರಿ ಪ್ರಕಾಶ ರಾವ್ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ನಿರಂಜನ್, ವಲಯ ಮೇಲ್ವಿಚಾರಿಕಿ ನಂದಾ, ವಿವಿಧ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸುನೀತಾ ಕೋಮಾರಿ, ಲಕ್ಷ್ಮೀಬಾಯಿ ಪತ್ತಾರ್, ಜಯಶ್ರೀ, ಶಿವಬಾಯಿ ಕವಲೂರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪದಾಧಿಕಾರಿ
  • ತರಬೇತಿ
  • ಕಾರ್ಯಕ್ರಮ
ಹನುಮಸಾಗರ: ಮಹಿಳೆಯರು ಸ್ವಾವಲಂಬಿಗಳಾಗಿ ಕುಟುಂಬ ನಿರ್ವಹಿಸಲು ಸ್ವಸಹಾಯ ಸಂಘಗಳು ಸಹಾಯಕವಾಗಿವೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಪ್ರಕಾಶ ರಾವ್ ಹೇಳಿದರು.
ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ ಜಗದಂಬಾ ಕಲ್ಯಾಣ ಮಂಟದಲ್ಲಿ ಮಂಗಳವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಹಮ್ಮಿಕೊಂಡಿದ್ದ ಹನುಮಸಾಗರ ಕಾರ್ಯಕ್ಷೇತ್ರದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಉಳಿತಾಯ ಮತ್ತು ಸಾಲ ಚಟುವಟಿಕೆಗಳನ್ನು ಉತ್ತೇಜಿಸಲಾಗಿದೆ. ಸಂಸ್ಥೆಯಿಂದ ಸಂಘಗಳಿಗೆ ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಕೌಶಲ ತರಬೇತಿ ನೀಡಲಾಗುತ್ತಿದೆ. ಸರ್ಕಾರದ ಆರ್ಥಿಕ ಯೋಜನೆಗಳ ಲಾಭ ಪಡೆಯಲು ಸಹಾಯ ಮಾಡಲಾಗುತ್ತಿದೆ. ಸಾಮಾಜಿಕ ಸಬಲೀಕರಣಕ್ಕಾಗಿ ವರದಕ್ಷಿಣೆ, ಬಾಲ್ಯವಿವಾಹ ತಡೆಗಟ್ಟಲು ಹಾಗೂ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಲು ಮಹಿಳೆಯರು ಮುಂದಾಗಬೇಕು ಎಂದರು.
ಪ್ರಮುಖರಾದ ಶೋಭಾ ವಡ್ಡರ, ವಲಯ ಸೇವಾಪ್ರತಿನಿಧಿಗಳಾದ ಅಬುಬಕರ್, ರೇಷ್ಮಾ, ಮಂಜುಳಾ, ಗಿರೀಜಾ, ಫಾತೀಮಾ, ಶರಣಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net