ಕಳೆದ ತಿಂಗಳು ಕನಕಗಿರಿ ಉತ್ಸವಕ್ಕೆ ಆರು ಕೋಟಿ ರೂ. ನೀಡಿದರೆ, ಆನೆಗೊಂದಿ ಉತ್ಸವಕ್ಕೆ ಮೂರು ಕೋಟಿ ರೂ. ನೀಡಿದೆ. ಮೇ 16 ಮತ್ತು 17ರಂದು ಆಚರಿಸಲು ಸಕಲ ಸಿದ್ಧತೆ ಪೂರ್ಣಗೊಂಡಿದ್ದವು. ಕೊನೇ ಮೂರು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಸಮಯ ಸಿಗಲಿಲ್ಲ ಎಂಬ ಕಾರಣ ನೀಡಿ ತರಾತುರಿಯಲ್ಲಿ ಜೂನ್ 9 ಮತ್ತು 10ಕ್ಕೆ ಮುಂದೂಡಲಾಗಿದೆ. ವೇದಿಕೆ, ಲಾಂಛನ, ಬ್ಯಾನರ್, ಆಮಂತ್ರಣ ಪತ್ರಿಕೆ, ಜಾಹಿರಾತು ಲಕಗಳ ಪ್ರದರ್ಶನ, ಗಣ್ಯರು, ಕಲಾವಿದರನ್ನೂ ಆಯ್ಕೆ ಮಾಡಿದ್ದರೂ ಉತ್ಸವ ಆಚರಿಸಲಿಲ್ಲ.