ಎಲ್ಲೆಲ್ಲಿ ಎಷ್ಟು ಪ್ರಮಾಣ: ಕುಕನೂರು ತಾಲೂಕಿನಲ್ಲಿ ಸದ್ಯ 46.7ಮಿಮೀ ವಾಡಿಕೆ ಪೈಕಿ 69.9ಮಿಮೀ ಮಳೆಯಾಗಿದೆ. ಮೆಕ್ಕೆಜೋಳ 12,956 ಹೆಕ್ಟೇರ್ ಬಿತ್ತನೆ ಗುರಿ ನಿಗದಿಯಾಗಿದ್ದು, 5,740 ಹೆಕ್ಟೇರ್ ಬಿತ್ತನೆಯಾಗಿದೆ. ತೊಗರಿ 1,190 ಹೆಕ್ಟೇರ್ ಗುರಿ ಪೈಕಿ 4,260 ಹೆಕ್ಟೇರ್, ಹೆಸರು 22,290 ಹೆಕ್ಟೇರ್ ಗುರಿಗೆ 9,885 ಹೆಕ್ಟೇರ್, ಶೇಂಗಾ 2,346 ಹೆಕ್ಟೇರ್ ಗುರಿ ಪೈಕಿ 110 ಹೆಕ್ಟೇರ್, ಸೂರ್ಯಕಾಂತಿ 5,102 ಹೆಕ್ಟೇರ್ ಗುರಿಗೆ 1,020 ಹೆಕ್ಟೇರ್ ಬಿತ್ತನೆಯಾಗಿದೆ. ಒಟ್ಟು 50,366 ಹೆಕ್ಟೇರ್ ಬಿತ್ತನೆಗೆ ಗುರಿ ನಿಗದಿಯಾಗಿದ್ದು, ಇದರಲ್ಲಿ 23,785 ಹೆಕ್ಟೇರ್ ಬಿತ್ತನೆಯಾಗಿದೆ.