ಫಾತಿಮಾ ಸಾಧನೆ ಸಮಾಜಕ್ಕೆ ಮಾದರಿ

ಕನಕಗಿರಿಯ ಅಂಬೇಡ್ಕರ್ ವೃತ್ತದಲ್ಲಿ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್ ಜಯಂತಿ ಆಚರಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಛಲವಾದಿ, ಪಪಂ ಹಂಗಾಮಿ ಅಧ್ಯಕ್ಷ ಕಂಠಿರಂಗ ನಾಯಕ, ಪ್ರಮುಖರಾದ ನೀಲಕಂಠ ಬಡಿಗೇರ್, ಮಕ್ತುಮ್ ಸಾಬ, ಶಶಿ ಕೋರಿ, ಮಂಜುನಾಥ, ಉಮೇಶ ಮ್ಯಾಗಡೆ, ಕಲ್ಯಾಣಪ್ಪ ಇತರರಿದ್ದರು.

Published on
ಕನಕಗಿರಿ: ಮಹಿಳೆಯರಿಗೆ ಶಿಕ್ಷಣ ದೊರೆಯದ ಕಾಲದಲ್ಲಿ ಅಕ್ಷರ ಕಲಿತು ಮೊದಲ ಮುಸ್ಲಿಂ ಶಿಕ್ಷಕಿಯಾಗಿದ್ದ ಫಾತಿಮಾ ಶೇಖ್ ಅವರ ಸಾಧನೆ ಸಮಾಜಕ್ಕೆ ಮಾದರಿ ಎಂದು ಪ್ರಗತಿಪರ ಮುಖಂಡ ಪಾಮಣ್ಣ ಅರಳಿಗನೂರು ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಫಾತಿಮಾ ಶೆಖ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಫಾತಿಮಾ ಅವರು ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕಿಯಾಗಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ್ದಾರೆ.
19ನೇ ಶತಮಾನದಲ್ಲಿ ಫುಲೆ ದಂಪತಿ ಜತೆಗೆ ಅಸ್ಪಶ್ಯರು ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಶೇಖ್ ಶ್ರಮಿಸಿ ಕ್ರಾಂತಿ ಮಾಡಿದ್ದರು. ಫುಲೆ ದಂಪತಿಯನ್ನು ಮನೆಯಿಂದ ಹೊರಹಾಕಿದಾಗ ಉಸ್ಮಾನ್ ಶೇಖ್ ಅವರ ಮನೆಯಲ್ಲಿ ಶಾಲೆ ಮುಂದುವರಿಸಲು ಸಹಾಯ ಮಾಡಿದ್ದರು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಛಲವಾದಿ, ಪಪಂ ಹಂಗಾಮಿ ಅಧ್ಯಕ್ಷ ಕಂಠಿರಂಗ ನಾಯಕ, ಪ್ರಮುಖರಾದ ನೀಲಕಂಠ ಬಡಿಗೇರ್, ಮಕ್ತುಮ್ ಸಾಬ, ಶಶಿ ಕೋರಿ, ಮಂಜುನಾಥ, ಉಮೇಶ ಮ್ಯಾಗಡೆ, ಕಲ್ಯಾಣಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net