ಇಟಗಿಯ ಭೂಕೈಲಾಸ ಮೇಲು ಗದ್ದುಗೆ ಹಿರೇಮಠದ ಗುರುಶಾಂತವೀರ ಸ್ವಾಮೀಜಿ ಸಮ್ಮುಖದಲ್ಲಿ ಪೊಲೀಸರನ್ನು ಲೆಕ್ಕಿಸದೆ ಬಿಎಸ್ಪಿಲ್ ಮುಖ್ಯ ದ್ವಾರ ಹಾಗೂ ತಡೆಗೋಡೆ ಮುರಿದು ಒಳ ಪ್ರವೇಶಿಸಿದರು. ಕೆರೆ ಬಳಿ ತೆರಳಿ ನಮ್ಮ ಕೆರೆ ನಮ್ಮ ಹಕ್ಕು ಎಂದು ಘೋಷಣೆ ಹಾಕಿದರು. ಬಳ್ಳಾರಿ ಐಜಿಪಿ ಡಾ.ಪಿ.ಎಸ್.ಹರ್ಷ, ಎಸ್ಪಿಗಳಾದ ಜಾಹ್ನವಿ, ಡಾ.ರಾಮ್ ಎಲ್.ಅರಸಿದ್ದಿ ಸೇರಿ ಇತರ ಪೊಲೀಸರು ತಡೆಯಲೆತ್ನಿಸಿದರೂ ರೈತರು ಜಗ್ಗಲಿಲ್ಲ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.