ಅಧಿಕಾರಿಗಳಿಗೆ ರೈತರಿಂದ ತರಾಟೆ

ಕೊಪ್ಪಳ ತಾಲೂಕಿನ ಬಸಾಪುರ ಬಳಿ ರೈತರು ಕಾಲುವೆ ಕಾಮಗಾರಿ ನಡೆಸದಂತೆ ಗುರುವಾರ ಅಧಿಕಾರಿಗಳನ್ನು ತಡೆದರು.
ಕೊಪ್ಪಳ ತಾಲೂಕಿನ ಬಸಾಪುರ ಬಳಿ ರೈತರು ಕಾಲುವೆ ಕಾಮಗಾರಿ ನಡೆಸದಂತೆ ಗುರುವಾರ ಅಧಿಕಾರಿಗಳನ್ನು ತಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ
  • ಕಾಲುವೆ ಕಾಮಗಾರಿ ಆರಂಭಕ್ಕೆ ತಡೆ
ಕೊಪ್ಪಳ: ತಾಲೂಕಿನ ಬಸಾಪುರ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ನೀರಿಗೆ ಕೊಚ್ಚಿ ಹೋಗಿ ಅಪಾರ ಭತ್ತ ಹಾನಿಯಾಗಿದೆ. ನಷ್ಟ ಪರಿಹಾರ ನೀಡದೆ ಕಾಮಗಾರಿ ಆರಂಭಿಸಬೇಡಿ ಎಂದು ರೈತರು ಗುರುವಾರ ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಕಾಲುವೆ ಮೈಲ್​ 10ರ ಬಳಿ ಮೂರು ತಿಂಗಳ ಹಿಂದೆ ಬೋಂಗಾ ಬಿದ್ದು ನೀರು ಹರಿಯುತ್ತಿದೆ. ಹೀಗಿದ್ದರೂ ಅಧಿಕಾರಿಗಳು ರಿಪೇರಿ ಮಾಡಿಲ್ಲ. ಬದಲಿಗೆ ಮಾ.17ರಂದು ಕೊಪ್ಪಳ-ರಾಯಚೂರು ಜಿಲ್ಲೆಗಳಿಗೆ ಕುಡಿವ ನೀರಿಗಾಗಿ 2 ಸಾವಿರ ಕ್ಯೂಸೆಕ್​ ಹರಿಸಲಾಗಿದೆ. ರಭಸ ಹೆಚ್ಚಿದ್ದರಿಂದ ಬೋಂಗಾ ಕಿತ್ತು ಹೋಗಿ ಕಾಲುವೆಯೇ ಕೊಚ್ಚಿ ಹೋಗಿದೆ. ಸುಮಾರು 30 ಮೀಟರ್​ ಹಾನಿಯಾಗಿದೆ.
ನೀರು ಹರಿದು 300-400 ಎಕರೆ ಭತ್ತದ ಪೈರು ಹಾಳಾಗಿದೆ. ಇದರಿಂದ ರೈತರು ಕೆರಳಿದ್ದಾರೆ. ಮೊದಲೇ ಎಚ್ಚರಿಕೆ ವಹಿಸದಿದ್ದಕ್ಕೆ ಕೆಂಡವಾಗಿದ್ದಾರೆ. ಆರಂಭದಲ್ಲೇ ಮಾಹಿತಿ ನೀಡಿದರೂ ನೀರಾವರಿ ಅಧಿಕಾರಿಗಳು ರ್ನಿಲಸಿದ್ದಾರೆ. ಇದೀಗ ದೊಡ್ಡ ಅನಾಹುತ ಆಗಿದೆ. ಕಾಮಗಾರಿ ನಡೆಸಿ ಮತ್ತೆ ಸುಮ್ಮನಾಗುತ್ತಾರೆ. ನಮಗೆ ನಷ್ಟ ಪರಿಹಾರ ಕೊಡುವವರು ಯಾರು ಎಂದು ಪ್ರಶ್ನಿಸಿದರು.
ಸ್ಥಳಕ್ಕೆ ಸಂಸದ ರಾಜಶೇಖರ ಹಿಟ್ನಾಳ, ತಹಸೀಲ್ದಾರ್​ ಬಸವರಾಜ ಆಗಮಿಸಿದರು. ಕೆಲಸ ಮಾಡಲು ಅನುಮತಿಸುವಂತೆ ಮನವಿ ಮಾಡಿದರು. ಆದರೆ, ರೈತರು ಅವಕಾಶ ನೀಡದೆ ತಡೆದರು. ಕೆಲ ಕಾಲ ವಾಗ್ವಾದ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net