ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಆಂದೋಲನ ಕಾರ್ಯಕ್ರಮವನ್ನು ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ ಉದ್ಘಾಟಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ, ತಿಮ್ಮಣ್ಣ ಚವಡಿ, ಡಾ. ಬದರಿ ಪ್ರಸಾದ, ವಿರೂಪಣ್ಣ ನವೋದಯ, ಶಿವರಾಮ, ಶಿವಶಂಕರ್ ಕುರೇಶಿ, ಶ್ರೀಪಾದ ಮುರುಡಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶರಣೇಗೌಡ ಮಾಲಿ ಪಾಟೀಲ ಸಲಹೆ
ಕೊಪ್ಪಳ : ಗೊಬ್ಬರಗಳ ಕೊರತೆ ಹಾಗೂ ಬದಲಾಗುತ್ತಿರುವ ಕೃಷಿ ಪರಿಸ್ಥಿತಿಯಲ್ಲಿ ರೈತರು ಹಂತಹಂತವಾಗಿ ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ಮುಖ ಮಾಡಿ ಕೃಷಿ ಮುಂದುವರಿಸಬೇಕು ಎಂದು ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ ಹೇಳಿದರು.
ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿಗಳು, ಕೃಷಿ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ರೈತರು ಲಭ್ಯವಿರುವ ತಾಂತ್ರಿಕ ಮಾಹಿತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ ಮಾತನಾಡಿ, ಉತ್ತಮ ಗುಣಮಟ್ಟದ ಬೀಜಗಳ ಬಳಕೆ ಹಾಗೂ ನೈಸರ್ಗಿಕ ಕೃಷಿ ಅಳವಡಿಕೆಗೆ ರೈತರು ಆದ್ಯತೆ ನೀಡಬೇಕು ಎಂದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ಮಾತನಾಡಿ, ರೈತರು ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಕೃಷಿ ಕೈಗೊಳ್ಳಬೇಕು. ರೈತರು ತಮ್ಮ ಹೊಲದಿಂದ ಕೊಚ್ಚಿ ಹೋಗುವ ಮಣ್ಣನ್ನು ಮರಳಿ ತಂದು ಭೂಮಿಯ ಫಲವತ್ತತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಬದರಿ ಪ್ರಸಾದ ಮಾತನಾಡಿ, ರೈತರು ನಿರಂತರ ತರಬೇತಿಗಳ ಮೂಲಕ ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ಹೆಚ್ಚಿನ ಲಾಭ ಗಳಿಸಬೇಕು ಎಂದು ತಿಳಿಸಿದರು.
ಡಾ. ರಾಘವೇಂದ್ರ ಗೋಡಂಬಿ ಬೇಸಾಯ ಹಾಗೂ ಡಾ. ಅವಿನಾಶ ರಾಸಾಯನಿಕ ಮತ್ತು ನ್ಯಾನೋ ಗೊಬ್ಬರಗಳ ಕುರಿತು ತಾಂತ್ರಿಕ ಉಪನ್ಯಾಸ ನೀಡಿದರು.
ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ವಿರೂಪಣ್ಣ ನವೋದಯ, ಎ್ಪಿಒ ರಾಜ್ಯ ನಿರ್ದೇಶಕ ಶಿವರಾಮ, ಶಿವಶಂಕರ್ ಕುರೇಶಿ, ಶ್ರೀಪಾದ ಮುರುಡಿ, ಪ್ರಗತಿಪರ ರೈತರಾದ ಲಿಂಗಪ್ಪ, ಶ್ರೀನಿವಾಸ ಜಾಲಿಹಾಳ್, ಜಡೆ ಸ್ವಾಮಿ, ಬಸವರಾಜ ಗೊಂಡಬಾಳ ಇತರರಿದ್ದರು.