ಎಷ್ಟು ್ಯಾನ್ ಅಳವಡಿಕೆಗೆ ಅನುಮತಿ ಸಿಕ್ಕಿದೆ, ಎಷ್ಟು ಅಳವಡಿಕೆ ಮಾಡುತ್ತೀರಿ ಎಂಬ ಮಾಹಿತಿ ನೀಡಿ. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಪಂ ಇಒ, ಪಿಡಬ್ಲೂಡಿ, ಪಿಆರ್ಇಡಿ, ಪೊಲೀಸ್, ಜೆಸ್ಕಾಂ, ಅರಣ್ಯ ಸೇರಿ ಇತರ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮತಿ ರಚಿಸಿ. ಸಮಿತಿ ಕಂಪನಿ ಪಡೆದ ಅನುಮತಿ ಪರಿಶೀಲಿಸಲಿ. ಸಿಎಸ್ಆರ್ ಅನುದಾನದಲ್ಲಿ ಹಾಳಾದ ಎಷ್ಟು ರಸ್ತೆ ಮರು ನಿರ್ಮಿಸಿದ್ದಾರೆಂದು ಮಾಹಿತಿ ಪಡೆಯಿರಿ. ಇನ್ನೊಂದು ಸಭೆ ಕರೆಯಲಿದ್ದು, ಅಷ್ಟರೊಳಗೆ ಎಲ್ಲ ಮಾಹಿತಿ ಸಂಗ್ರಹಿಸಿ. ರೈತರ ದೂರು ಎಲ್ಲಿವೆ ಎಂದು ತಿಳಿಯಿರಿ. ಕಂಪನಿ ಪ್ರತಿನಿಧಿಗಳು ಸಮಗ್ರ ಮಾಹಿತಿಯೊಂದಿಗೆ ಮುಂದಿನ ಸಭೆಗೆ ಬನ್ನಿ ಎಂದು ತಾಕೀತು ಮಾಡಿದರು.