ಸಹಕಾರಿ ಸಂಘದಲ್ಲಿ ಸದ್ಯ 200 ಟನ್ ಯೂರಿಯಾ ಹಾಗೂ 60 ಟನ್ ಕಾಂಪ್ಲೆಕ್ಸ್ ಗೊಬ್ಬರ ದಾಸ್ತಾನು ಇದ್ದರೂ, ಪ್ರತಿ ಎಕರೆಗೆ ಎಷ್ಟು ಚೀಲ ಗೊಬ್ಬರ ನೀಡಬೇಕು ಎಂಬ ವಿಚಾರದಲ್ಲಿ ಅಧಿಕಾರಿಗಳು ಗೊಂದಲದಲ್ಲಿದ್ದಾರೆ ಎನ್ನಲಾಗಿದೆ. ಎಫ್‌ಐಡಿ ಆಧಾರದಲ್ಲಿ ಪ್ರತಿ ಎಕ್ಕರೆಗೆ ಕೇವಲ ಒಂದು ಚೀಲ ಗೊಬ್ಬರ ನೀಡಲು ಅಧಿಕಾರಿಗಳು ಮುಂದಾಗಿರುವುದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.