ರೈತರ ಬಹುದಿನಗಳ ಕನಸು ನನಸು

ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ರಾಸಾಯನಿಕ ಗೊಬ್ಬರ ವಿತರಣೆ ಮಾಡಲಾಯಿತು.
ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ರಾಸಾಯನಿಕ ಗೊಬ್ಬರ ವಿತರಣೆ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಲಿಂಗದಹಳ್ಳಿಯಲ್ಲಿ ಗೊಬ್ಬರ ವಿತರಣೆ ಆರಂಭ
ಕೊಪ್ಪಳ : ರೈತರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದನೆ ದೊರೆತಿದ್ದು, ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರಾಸಾಯನಿಕ ಗೊಬ್ಬರ ವಿತರಣೆಗೆ ಆರಂಭದಿಂದ ಲಿಂಗದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಗೊಬ್ಬರ ಸ್ಥಳಿಯ ಮಟ್ಟದಲ್ಲೇ ಲಭ್ಯವಾಗಲಿದೆ.
ಬಿತ್ತನೆ ಹಾಗೂ ಬೆಳೆ ನಿರ್ವಹಣೆ ಪ್ರಮುಖ ಹಂತದಲ್ಲಿ ಗೊಬ್ಬರದ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ರೈತರು ಇದುವರೆಗೆ ದೂರದ ಪಟ್ಟಣಗಳಿಗೆ ತೆರಳಿ ಗೊಬ್ಬರ ಖರೀದಿಸಬೇಕಾಗುತ್ತಿತ್ತು. ಇದೀಗ ಗ್ರಾಮದಲ್ಲೇ ಗೊಬ್ಬರ ದೊರೆಯುತ್ತಿರುವುದರಿಂದ ಸಮಯ ಹಾಗೂ ಸಾರಿಗೆ ವೆಚ್ಚ ಉಳಿತಾಯವಾಗಲಿದ್ದು, ಕೃಷಿ ಕಾರ್ಯಗಳು ಸುಗಮವಾಗಿ ಸಾಗಲಿವೆ ಎಂದು ರೈತರು ಅಭಿಪ್ರಾಯಪಟ್ಟರು.
ಗೊಬ್ಬರ ವಿತರಣೆ ಆರಂಭವಾಗಿರುವುದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳನ್ನು ಸಹಕಾರ ಸಂಘದ ಮೂಲಕ ನಿರಂತರವಾಗಿ ಪೂರೈಸುವಂತೆ ಮನವಿ ಮಾಡಿದರು. ಲಿಂಗದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈ ಕ್ರಮಕ್ಕೆ ರೈತ ಸಮುದಾಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net