ಕುಷ್ಟಗಿ: ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯ ಕೃಷಿಕರು ಮುಂಗಾರು ಹಂಗಾಮಿನಲ್ಲಿ ಬೀಜೋತ್ಪಾದನೆ ಬೆಳೆಗೆ ಹೆಚ್ಚು ಆಸಕ್ತಿ ವಹಿಸಿದ್ದಾರೆ.
ತಾಲೂಕು ಕೆಂಪು ಮಣ್ಣಿನಿಂದ ಕೂಡಿದ್ದು, ಬೋರ್ವೆಲ್ ನೀರು ಬಳಸಿ ಮೂರ್ನಾಲ್ಕು ತಿಂಗಳಿಗೆ ಫಲ ಕೊಡುವ ಬೀಜೋತ್ಪಾದನೆ ಬೆಳೆಗಳನ್ನು ಬೆಳೆಯಲಾಗಿದೆ.
ತಾಲೂಕಿನ ಲಿಂಗದಹಳ್ಳಿ, ಹೊಮ್ಮಿನಾಳ, ಮೆತ್ತಿನಾಳ, ಮೆಣೇದಾಳ್, ಹುಲಿಯಾಪೂರು, ಗುಡ್ಡದ ಹನುಮಸಾಗರ, ಬಚನಾಳ, ಸಂಗನಾಳ, ವಿರುಪಾಪೂರು ಇತರ ಗ್ರಾಮಗಳಲ್ಲಿ ಬೀಜೋತ್ಪಾದನೆಯ ಕಲ್ಲಂಗಡಿ, ಹತ್ತಿ ಇತರ ಬೆಳೆ ಬೆಳೆಯುತ್ತಿದ್ದಾರೆ.
ರಕ್ಷಣೆಗೆ ಪರದೆ ಅಳವಡಿಕೆ: ಬೀಜೋತ್ಪಾದನೆ ಬೆಳೆಗಳಾದ ಮೆಣಸಿನಕಾಯಿ, ಕಲ್ಲಂಗಡಿ, ಟೊಮ್ಯಾಟೊ, ಬೆಂಡೆಕಾಯಿ ಬೆಳೆ ಇರಿಸಿರುವ ರೈತರು, ಉತ್ತಮ ಫಸಲಿನ ನಿರೀಕ್ಷೆ ಹೊಂದಿದ್ದಾರೆ. ಕರಡಿ, ನರಿ, ಪಕ್ಷಿಗಳು, ಜಾನುವಾರುಗಳಿಂದ ಬೆಳೆ ರಕ್ಷಿಸಿಕೊಳ್ಳಲು ಹೊಲದ ಸುತ್ತ ಪರದೆ ಅಳವಡಿಸಿದ್ದಾರೆ.