ಹಿರೇಹಳ್ಳ ಜಲಾಶಯದಿಂದ ಕಾಲುವೇಗೆ ನೀರು ಹರಿಸಿ

ಕೊಪ್ಪಳದ ಹಿರೇಹಳ್ಳ ಜಲಾಶಯದಿಂದ ಕಾಲುವೇಗೆ ನೀರು ಹರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ನೀರಾವರಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಅಧ್ಯಕ್ಷ ಸುಖಮುನಿ ಬಿ., ಗೌರವಾಧ್ಯಕ್ಷ ಬಸವರಾಜ್​ ಚೀಲವಾಡಗಿ, ಪದಾಧಿಕಾರಿಗಳಾದ ಪರಶುರಾಮ್​ ಬಿಸನಹಳ್ಳಿ, ವೀರೇಶ್​ ತಾವರಗೇರಿ, ಆನಂದ ಆರೇರ್​, ಚನ್ನಪ್ಪ ಸಜ್ಜನ್​ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಗಳಿಂದ ಮನವಿ
ಕೊಪ್ಪಳ : ಹಿರೇಹಳ್ಳ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದರೂ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸದಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಜಲಾಶಯದಲ್ಲಿ ಸಮರ್ಪಕ ಪ್ರಮಾಣದ ನೀರು ಲಭ್ಯವಿದ್ದರೂ ಕಾಲುವೆಗಳಿಗೆ ನೀರು ಹರಿಸದ ಕಾರಣ ಸುಮಾರು 5,000 ಎಕರೆ ಕೃಷಿ ಭೂಮಿ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಬಲದಂಡೆ ಕಾಲುವೆ ವ್ಯಾಪ್ತಿಯ ಮಾದಿನೂರು, ನೆರೆಗಲ್ಲ, ಹುಚ್ಚಿರೇಶ್ವರ ಕ್ಯಾಂಪ್​, ಯತ್ನಟ್ಟಿ, ಮುದ್ಲಾಪುರ ಹಾಗೂ ಎಡದಂಡೆ ಕಾಲುವೆ ವ್ಯಾಪ್ತಿಯ ಕಿನ್ನಾಳ, ದ್ಯಾವುಲಾಪುರ, ಚೀಲವಾಡಗಿ, ಕಲಿಕೆರಿ, ಓಜನಹಳ್ಳಿ ಗ್ರಾಮಗಳ ರೈತರು ನೀರಾವರಿಯನ್ನು ಅವಲಂಬಿಸಿದ್ದು, ಮಳೆಯ ಕೊರತೆಯಿಂದ ಬೆಳೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ರೈತರು ತಿಳಿಸಿದರು.
ಹಿರೇಹಳ್ಳ ಜಲಾಶಯ ಈಗಾಗಲೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ವಿಳಂಬ ಮಾಡದೆ ಎರಡೂ ಕಾಲುವೆಗಳಿಗೆ ತಕ್ಷಣ ನೀರು ಹರಿಸಿ ರೈತರ ಬೆಳೆಗಳನ್ನು ರಕ್ಷಿಸಬೇಕು. ಒಂದು ವಾರದೊಳಗೆ ನೀರು ಹರಿಸುವ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಆಗ ಉಂಟಾಗುವ ಎಲ್ಲ ಪರಿಸ್ಥಿತಿಗಳಿಗೆ ನೀರಾವರಿ ಇಲಾಖೆಯೇ ಸಂಪೂರ್ಣ ಹೊಣೆ ಎಂದು ಸಂಘಟನೆ ಎಚ್ಚರಿಕೆ ನೀಡಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಸುಖಮುನಿ ಬಿ., ಗೌರವಾಧ್ಯಕ್ಷ ಬಸವರಾಜ್​ ಚೀಲವಾಡಗಿ, ಪದಾಧಿಕಾರಿಗಳಾದ ಪರಶುರಾಮ್​ ಬಿಸನಹಳ್ಳಿ, ವೀರೇಶ್​ ತಾವರಗೇರಿ, ಆನಂದ ಆರೇರ್​, ಚನ್ನಪ್ಪ ಸಜ್ಜನ್​, ಮೌನೇಶ್​ ಜಾಲಿಹಾಳ, ನಾಗರಾಜ್​ ಮೇಟಿ, ಬಸವರಾಜ್​ ಎಲೆಅಡಕಿ, ಖಜಾಸಾಬ್​ ತುಪ್ಪದ, ಬಸವರಾಜ್​ ಕೋವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net