ಇರುವ ನೀರಿನಲ್ಲಿ ಕುಡಿಯಲು, ಡೆಡ್ ಸ್ಟೋರೆಜ್ ಹಾಗೂ ಆಂಧ್ರ-ತೆಲಂಗಾಣ ಪಾಲು ಕಾಯ್ದಿರಿಸಿದಲ್ಲಿ. 15&18 ಟಿಎಂಸಿ ನೀರು ಉಳಿಯಲಿದೆ. ಡ್ಯಾಂನಲ್ಲಿ ಹಾಗೇ ಬಿಡುವ ಬದಲು ಬಳಕೆಗೆ ಯೋಚಿಸಬೇಕು. ಎಲ್ಲರೂ ರೈತರು. ಅಚ್ಚುಕಟ್ಟು ವ್ಯಾಪ್ತಿ ರೈತರ ಸಭೆ ಕರೆದು ಸೂಕ್ತ ತೀರ್ಮಾನ ಮಾಡಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಈ ಬಗ್ಗೆ ಗಟ್ಟಿ ನಿರ್ಧಾರ ಕೈಗೊಳ್ಳಬೇಕು. ಲಭ್ಯ ನೀರು ಬಳಕೆ ಮಾಡಿ ಎಷ್ಟು ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬಹುದು. ಅದಕ್ಕೆ ನಾವೆಲ್ಲ ಏನು ಮಾಡಬೇಕೆಂದು ಚರ್ಚಿಸಲಿ. ಇಂಥ ಪರಿಸ್ಥಿತಿ ಮೊದಲ ಬಾರಿ ನಿರ್ಮಾಣವಾಗಿದ್ದು, ಹೊಸ ಚಿಂತನೆ ಅವಶ್ಯ. ಈ ಬಗ್ಗೆ ಮನವಿ ಸಲ್ಲಿಸಿ ಮುಂದಿನ ತೀರ್ಮಾನ ಮಾಡುತ್ತೇವೆಂದು ತಿಳಿಸಿದರು.