ತಾಲೂಕಿನಲ್ಲಿ ಕನಕಗಿರಿ, ನವಲಿ ಹಾಗೂ ಹುಲಿಹೈದರ ಹೋಬಳಿಗಳ ಪೈಕಿ ಹುಲಿಹೈದರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಈ ವ್ಯಾಪ್ತಿಯಲ್ಲಿ 8,700 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 5,600 ಹೆಕ್ಟೇರ್‌ನಲ್ಲಿ ತೊಗರಿಯನ್ನೇ ಬಿತ್ತನೆ ಮಾಡಲಾಗಿದೆ. ಮಳೆಯ ಕೊರತೆಯಿರುವ ಕನಕಗಿರಿ ಹೋಬಳಿಯಲ್ಲಿ 9,600 ಹೆಕ್ಟೇರ್ ಪೈಕಿ 2,000 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತಿದ್ದು, ಬಿತ್ತನೆ ಕಾರ್ಯ ಮುಂದುವರಿದಿದೆ. ಇನ್ನು ನವಲಿ ಹೋಬಳಿಯಲ್ಲಿ 9,000 ಹೆಕ್ಟೇರ್ ಪೈಕಿ 2,000 ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ.