ಎಡದಂಡೆಯಿಂದ ದೊರೆಯದ ನೀರು ರೈತರ ಆಕ್ರೋಶ

ಕಾರಟಗಿಯ ತುಂಗಭ್ರಾ ಎಡದಂಡೆಯ ನೀರಾವರಿ ಕಚೇರಿ ಮುಂದೆ 31ನೇ ವಿತರಣಾ ಕಾಲುವೆ ವ್ಯಾಪ್ತಿ ಕೊನೆಯ ಹಾಗೂ ಕೆಳಭಾಗದ ರೈತರು ಸಮರ್ಪಕ ನೀರು ಪೂರೈಕೆ ಮತ್ತು ನೀರುಗಳ್ಳತನ ತಡೆಯುವಂತೆ ಒತ್ತಾಯಿಸಿ ಶನಿವಾರ ಪ್ರತಿಭಟನೆ ನಡೆಸಿದರು. ಹೋರಾಟದಲ್ಲಿ ಪ್ರಮುಖರಾದ ದಶರಥರೆಡ್ಡಿ ಚನ್ನಳ್ಳಿ, ಬಸವರಾಜ್ ಗೌಡ ಸಿದ್ರಾಮಪುರ, ಬಸವರಾಜ್ ಚನ್ನಳ್ಳಿ, ಶರಣಪ್ಪ ಕಡೆಮನಿ, ಬಸನಗೌಡ ಹುಡಾ ಮಲ್ಲೇಶಪ್ಪ ಸಾಹುಕಾರ ಮುಕ್ಕುಂದಾ, ನಾಗಪ್ಪ ಹ್ಯಾಟಿ ಸಿದ್ರಾಮಪುರ, ಶಂಬಣ್ಣ ಸಾಹುಕಾರ ಚನ್ನಳ್ಳಿ, ಪ್ರಹ್ಲಾದ ರೆಡ್ಡಿ ಚನ್ನಳ್ಳಿ ವೀರೇಶಪ್ಪ ಬಂಡಿ, ಮಲ್ಲಪ್ಪ ಬ್ಯಾಗವಾಟ್, ಯಮನೂರಪ್ಪ  ಚಲುವಾದಿ ಸೇರಿ ಅನೇಕರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಾರಟಗಿ
  • ನೀರಾವರಿ
  • ಕಚೇರಿ ಎದುರು

* ಬೆಳೆಗಳು ಒಣಗುತ್ತಿರುವುದರಿಂದ ರೈತರಲ್ಲಿ ಆತಂಕ

ವಿಜಯವಾಣಿ ಸುದ್ದಿಜಾಲ ಕಾರಟಗಿ
ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ ಭತ್ತ, ಕಬ್ಬು, ಹತ್ತಿ, ಸೂರ್ಯಕಾಂತಿ ಹಾಗೂ ಭತ್ತದ ಸಸಿಮಡಿಗಳು ನೀರಿಲ್ಲದೆ ಒಣಗುತ್ತಿರುವುದರಿಂದ ಕಂಗೆಟ್ಟ ರೈತರು, ಸಮರ್ಪಕ ನೀರು ಪೂರೈಸಬೇಕು ಮತ್ತು ಕಾಲುವೆಗಳ ಮೇಲ್ಭಾಗದಲ್ಲಿ ನೀರುಗಳ್ಳತನ ತಡೆಯಬೇಕೆಂದು ಒತ್ತಾಯಿಸಿ 31ನೇ ವಿತರಣಾ ನಾಲೆ ವ್ಯಾಪ್ತಿಯ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಕೊನೆ ಹಾಗೂ ಕೆಳಭಾಗದ 11ಕ್ಕೂ ಹೆಚ್ಚು ಗ್ರಾಮಗಳ ರೈತರು ಇಲ್ಲಿನ ನೀರಾವರಿ ಕಚೇರಿ ಮುಂದೆ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ವಿತರಣಾ ಕಾಲುವೆಗೆ ನೀರು ಬಿಡುಗಡೆಯಾಗಿ 12 ದಿನಗಳು ಕಳೆದರೂ ಕೆಳಭಾಗಕ್ಕೆ ನೀರು ತಲುಪಿಲ್ಲ. ಇದರಿಂದಾಗಿ ಬಿತ್ತನೆ ಮಾಡಿರುವ ಭತ್ತ, ಕಬ್ಬು, ಹತ್ತಿ, ಸೂರ್ಯಕಾಂತಿ ಬೆಳೆಗಳು ಹಾಗೂ ಭತ್ತದ ಸಸಿಮಡಿ ಒಣಗುತ್ತಿವೆ. ಕಳೆದ ಬೇಸಿಗೆ ಬೆಳೆಯನ್ನು ಕಳೆದುಕೊಂಡಿದ್ದ ರೈತರಿಗೆ ಈ ಬಾರಿಯೂ ಮುಂಗಾರಿನಲ್ಲಿ ನೀರಿನ ಅಭಾವ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿತರಣಾ ಕಾಲುವೆ 31/6, 31/8, 31/9 ಹಾಗೂ 31/10ರ ವ್ಯಾಪ್ತಿಗೆ ಬರುವ ಸಿಂಧನೂರು ತಾಲೂಕಿನ ಮುಕ್ಕುಂದಾ, ಹುಡಾ, ಮಾವಿನಮಡ್ಗು, ಸಿದ್ರಾಂಪುರ, ಚೆನ್ನಳ್ಳಿ, ಗಣೇಶಕ್ಯಾಂಪ್ ಹಾಗೂ ಕೊಪ್ಪಳ ಜಿಲ್ಲೆಯ ಬೂದುಗುಂಪಾ, ತಿಮ್ಮಾಪುರ, ಹಾಲಸಮುದ್ರ, ಕಿಂದಿಕ್ಯಾಂಪ್, ಯರಡೋಣಾ, ಈಳಿಗನೂರು ಕ್ಯಾಂಪ್‌ಗಳಿಗೆ ನೀರು ಬಂದಿಲ್ಲ. ಇದರಿಂದಾಗಿ ಹಲವೆಡೆ ನಾಟಿ ಕಾರ್ಯವೂ ಸ್ಥಗಿತಗೊಂಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಲುವೆಯ ಮೇಲ್ಭಾಗದ ಕಾರಟಗಿ, ಚೆಳ್ಳೂರು, ಸೋಮನಾಳ, ದೇವಿಕ್ಯಾಂಪ್ ಹಾಗೂ ಗಣೇಶಕ್ಯಾಂಪ್ ಭಾಗಗಳಲ್ಲಿ ಪ್ರಭಾವಿಗಳು ಬೃಹತ್ ಪಂಪ್‌ಸೆಟ್‌ಗಳನ್ನು ಅಳವಡಿಸಿ ಅಕ್ರಮವಾಗಿ ನೀರು ಪಡೆಯುತ್ತಿದ್ದಾರೆ. ಇದರಿಂದ ಅಧಿಕೃತ ನೀರಾವರಿ ಹಕ್ಕು ಹೊಂದಿದ ತಮಗೆ ಅನ್ಯಾಯವಾಗುತ್ತಿದೆ. ಕೂಡಲೇ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿ, ನಿಗದಿಪಡಿಸಿದ ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ದಶರಥರೆಡ್ಡಿ ಚೆನ್ನಳ್ಳಿ ಈ ವೇಳೆ ಒತ್ತಾಯಿಸಿದರು.
ಬೆಳಗ್ಗೆ 10 ಗಂಟೆಗೆ ಆರಂಭವಾದ ಧರಣಿ ಸ್ಥಳಕ್ಕೆ ಮಧ್ಯಾಹ್ನ ಭೇಟಿ ನೀಡಿದ 31/6ರ ಸೆಕ್ಷನ್ ಆಫೀಸರ್ ಸಹನಾ ಲಕ್ಕುಂಡಿ ಅವರಿಗೆ ರೈತರು ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸಲು ಒತ್ತಾಯಿಸಿದರು. ಮೇಲಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಹೋರಾಟ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಸಂಜೆವರೆಗೂ ಧರಣಿ ಮುಂದುವರಿಸಿದರು.
ಎಇಇ ವೆಂಕಟೇಶ ಅವರು ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ ಎಂದೂ ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ಪಿಐ ಸುಧೀರ್ ಬೆಂಕಿ ಅವರೊಂದಿಗೆ ನೀರಿನ ಸಮಸ್ಯೆ ಹಾಗೂ ನೀರುಗಳ್ಳತನ ಕುರಿತು ಚರ್ಚಿಸಿ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net