ಡ್ಯಾಂಗೆ ಜಿಗಿಯಲು ಯತ್ನಿಸಿದ ರೈತ

ಕೊಪ್ಪಳ ತಾಲೂಕಿನ ಮುನಿರಾಬಾದ್​ ಟಿಬಿ ಡ್ಯಾಂನಲ್ಲಿ ಸೋಮವಾರ ಜಲಾಶಯಕ್ಕೆ ಜಿಗಿಯಲು ಯತ್ನಿಸಿದ ರೈತ ಎಸ್​.ಖಾದ್ರಿಯನ್ನು ತಡೆದ ಪೊಲೀಸರು.
ಕೊಪ್ಪಳ ತಾಲೂಕಿನ ಮುನಿರಾಬಾದ್​ ಟಿಬಿ ಡ್ಯಾಂನಲ್ಲಿ ಸೋಮವಾರ ಜಲಾಶಯಕ್ಕೆ ಜಿಗಿಯಲು ಯತ್ನಿಸಿದ ರೈತ ಎಸ್​.ಖಾದ್ರಿಯನ್ನು ತಡೆದ ಪೊಲೀಸರು.
Published on

ಪ್ರಮುಖ ಮುಖ್ಯಾಂಶಗಳು

  • ನೀರಾವರಿ ನಿಗಮ ಕಚೇರಿ ಎದುರು ಅಹೋರಾತ್ರಿ ಧರಣಿ
ಕೊಪ್ಪಳ : ಮುನಿರಾಬಾದ್​ ತುಂಗಭದ್ರಾ ಜಲಾಶಯದಿಂದ ವಿಜಯನಗರ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂದ ಅಧ್ಯಕ್ಷ ಎಸ್​.ಖಾದ್ರಿ ಅಧಿಕಾರಿಗಳ ನಡೆಗೆ ಬೇಸತ್ತು ಡ್ಯಾಂಗೆ ಜಿಗಿಯಲು ಯತ್ನಿಸಿದ ಟನೆ ನಡೆದಿದೆ.
ಮಳೆ ಆಗದ ಕಾರಣ ಜಲಾಶಯಕ್ಕೆ ನಿರೀತ ನೀರು ಹರಿದು ಬಂದಿಲ್ಲ. 27 ಟಿಎಂಸಿ ಸಂಗ್ರಹವಾಗಿದ್ದು ಸರ್ಕಾರ ಕುಡಿಯಲು ಮಾತ್ರ ಬಳಸುವಂತೆ ಆದೇಶಿಸಿದೆ. ವಿಜಯನಗರ ಕಾಲುವೆ ವ್ಯಾಪ್ತಿ ರೈತರು ಬೆಳೆಗಳಿಗೆ ನೀರು ಬಿಡುವಂತೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಸ್ಪಂದಿಸದಿದ್ದಕ್ಕೆ ಕಳೆದ ಮೂರು ದಿನದಿಂದ ನೀರಾವರಿ ನಿಗಮ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ನೀರು ಬಿಡುವುದಿಲ್ಲವೆಂದು ಅಧಿಕಾರಿಗಳು ಹೇಳಿದ್ದಕ್ಕೆ ಬೇಸತ್ತ ಎಸ್​.ಖಾದ್ರಿ ನೀರಿಲ್ಲದಿದ್ದರೆ ನಾವು ಇದ್ದು ಏನು ಮಾಡೋಣ ಎಂದು ಹೇಳಿ ಜಲಾಶಯದಲ್ಲಿ ಧುಮುಕಲು ಓಡಿದರು. ತಕ್ಷಣ ಎಚ್ಚೆತ್ತ ಪೊಲೀಸರು ಓಡಿಬಂದು ಹಿಡಿದು ನಿಲ್ಲಿಸಿದರು. ಮಹಿಳೆಯೊಬ್ಬರು ಉದ್ರೇಕಗೊಂಡು ತಲೆ ಸುತ್ತು ಬಂದು ಬಿದ್ದರು. ಬಳಿಕ ಚೇತರಿಸಿಕೊಂಡರು. ಪ್ರತಿಭಟನೆ ಉಗ್ರರೂಪ ಪಡೆದಿದ್ದು ಪೊಲೀಸ್​ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net