ಗಂಗಾವತಿಯ ಶ್ರೀ ಅಪ್ಸಾನಿ ಎನ್.ಆರ್. ಕಾನೂನು ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳ ಬೀಳ್ಕೋಡುಗೆ ಕಾರ್ಯಕ್ರಮವನ್ನು ಗಂಗಾವತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎ. ಸೋಮರಾಜು ಮಂಗಳವಾರ ಉದ್ಘಾಟಿಸಿದರು. ಸದಸ್ಯ ಜೆ.ನಾಗರಾಜ, ಆಡಳಿತಾಧಿಕಾರಿ ಪ್ರೊ.ಎ್.ಎಚ್.ಚಿತ್ರಗಾರ, ವಿಜಯವಾಣಿ ಗಂಗಾವತಿ ಆವೃತ್ತಿಯ ಸ್ಥಾನಿಕ ಸಂಪಾದಕ ಜಗನ್ನಾಥ ಆರ್. ದೇಸಾಯಿ ಇತರರಿದ್ದರು.
ಗಂಗಾವತಿ: ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸುತ್ತಿದ್ದು, ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣ ದೊರೆಯಲೆಂಬ ಕಾರಣಕ್ಕಾಗಿ ಲಾ ಕಾಲೇಜು ಆರಂಭಿಸಿದ್ದು, ಲಾಭಕ್ಕಾಗಿ ಅಲ್ಲ ಎಂದು ಗಂಗಾವತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎ. ಸೋಮರಾಜು ಹೇಳಿದರು.
ಗಂಗಾವತಿ ಶಿಕ್ಷಣ ಸಂಸ್ಥೆಯ ಶ್ರಿ ಅಪ್ಸಾನಿ ಎನ್.ಆರ್. ಕಾನೂನು ಮಹಾ ವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳ ಬೀಳ್ಕೋಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರಂತರ ಪರಿಶ್ರಮ ಮೂಲಕ ಲಾ ಕಾಲೇಜು ಮಂಜೂರು ಮಾಡಿಸಿಕೊಂಡಿದ್ದು, ಉತ್ತಮ ಲಿತಾಂಶ ಪಡೆಯುತ್ತಿದ್ದೇವೆ. ಶಿಕ್ಷಣ ಮತ್ತು ಕಲಿಕೆಗೆ ಮಾತ್ರ ಸೀಮಿತವಾಗದೆ, ಕ್ರಿಯಾಶೀಲ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗಿದೆ. ನಿರಂತರ ಅಧ್ಯಯನ ಮತ್ತು ನಿರೀಕ್ಷಿತ ಗುರಿಯೊಂದಿಗೆ ಪದವಿ ಪಡೆಯಬೇಕಿದ್ದು, ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.
ವಿಜಯವಾಣಿ ಗಂಗಾವತಿ ಆವೃತ್ತಿಯ ಸ್ಥಾನಿಕ ಸಂಪಾದಕ ಜಗನ್ನಾಥ ಆರ್. ದೇಸಾಯಿ ಮಾತನಾಡಿ, ಪ್ರತಿಯೊಬ್ಬರೂ ದೇಶದ ಕಾನೂನು ಗೌರವಿಸಬೇಕು. ಯಾರೂ ಹೊರತಲ್ಲ ಮತ್ತು ಪ್ರಶ್ನಾತೀತರಲ್ಲ. ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕಿದ್ದು, ಕ್ರಿಯಾಶೀಲತೆ ರೂಢಿಸಿಕೊಂಡವರಿಗೆ ಯಶಸ್ಸು ಸಾಧ್ಯ. ಪದವಿ ಪಡೆದರೆ ಸಾಲಲ್ಲ, ಭವಿಷ್ಯ ರೂಪಿಸಿಕೊಳ್ಳಲು ಕೌಶಲ ಮುಖ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದನ್ನು ಅರಿತುಕೊಳ್ಳಬೇಕಿದ್ದು, ಜಾಗತಿಕ ಮಟ್ಟದ ಮಾಹಿತಿಯನ್ನು ಪತ್ರಿಕೆ ಓದುವುದರ ಮೂಲಕ ತಿಳಿದುಕೊಳ್ಳುವಂತೆ ಸಲಹೆ ನೀಡಿದರು.
ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸಂಸ್ಥೆ ಸದಸ್ಯ ಜೆ.ನಾಗರಾಜ್, ಆಡಳಿತಾಧಿಕಾರಿ ಪ್ರೊ.ಎ್.ಎಚ್. ಚಿತ್ರಗಾರ, ಪ್ರಾಚಾರ್ಯೆ ಸಹನಾ, ಉಪನ್ಯಾಸಕರಾದ ಎಚ್.ಕನಕರಾಯ, ಅಯ್ಯನಗೌಡ, ಚಂದ್ರಶೇಖರ್ ಅರಳಿ ಇತರರಿದ್ದರು.