ಫೇಕ್​ ಡಾಕ್ಟರ್ಸ್​ ಎದೆಯಲ್ಲೀಗ ಢವಢವ !

fake doctors list dc DHO take actions
fake doctors list dc DHO take actions
Published on

ಪ್ರಮುಖ ಮುಖ್ಯಾಂಶಗಳು

  • ನಕಲಿ ವೈದ್ಯರಿಗೆ ಜಿಲ್ಲಾಧಿಕಾರಿಗಳ "ಸರ್ಜಿಕಲ್​ ಸ್ಟ್ರೆಕ್​'
  • ಡಿಸಿಗಳ ಅಂಗಳಕ್ಕೆ ಸೇರಿದ "ಬ್ಲಾಕ್​ ಲಿಸ್ಟ್​'
ಕೊಪ್ಪಳ: ರಾಜ್ಯಾದ್ಯಂತ ತಲೆ ಎತ್ತಿರುವ ನಕಲಿ ವೈದ್ಯರ ಹಾವಳಿಗೆ ಶಾಶ್ವತ ಮೂಗುದಾರ ಹಾಕಲು ಆರೋಗ್ಯ ಇಲಾಖೆ ಈಗ ಮಾಸ್ಟರ್​ ಪ್ಲಾನ್​ ರೂಪಿಸಿದೆ. ನಕಲಿಗಳ ಹೆಡೆಮುರಿ ಕಟ್ಟುವ ಪ್ರಕ್ರಿಯೆಯಲ್ಲಿ ಇದುವರೆಗೆ ಇದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳನ್ನು (ಡಿಎಚ್​ಒ) ಸಂಪೂರ್ಣವಾಗಿ ಬೈಪಾಸ್​ ಮಾಡಲಾಗಿದ್ದು, ಕಾರ್ಯಾಚರಣೆಯ ಪೂರ್ಣ ಜವಾಬ್ದಾರಿಯನ್ನು ನೇರವಾಗಿ ಜಿಲ್ಲಾಧಿಕಾರಿಗಳ ಹೆಗಲಿಗೆ ಹೊರಿಸಲಾಗಿದೆ. ಗುಪ್ತಚರ ಇಲಾಖೆ ಮೂಲಕ ಸಿದ್ಧಪಡಿಸಲಾದ ನಕಲಿ ವೈದ್ಯರ ರಹಸ್ಯ ಪಟ್ಟಿಯು ಈಗ ನೇರವಾಗಿ ಡಿಸಿಗಳ ಕೈಸೇರಿದ್ದು, ಸದ್ದಿಲ್ಲದೆ ಕಾರ್ಯಾಚರಣೆ ಬಿರುಸಾಗಿದೆ. ಸರ್ಕಾರದ ಈ ಅನಿರೀತ ನಡೆ ಮತ್ತು ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಕಣ್ಗಾವಲಿನಿಂದಾಗಿ ರಾಜ್ಯಾದ್ಯಂತ ಇರುವ ಫೇಕ್​ ಡಾಕ್ಟರ್​ಗಳ ಎದೆಯಲ್ಲಿ ಈಗ ಢವಢವ ಶುರುವಾಗಿದೆ.
ಅಧಿಕೃತ ವೈದ್ಯಕಿಯ ಶಿಣ ಪಡೆಯದ ಹಲವರು ಕೇವಲ ಅನುಭವದ ಆಧಾರದ ಮೇಲೆ ವೈದ್ಯವೃತ್ತಿ ಮಾಡುತ್ತಾ ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಯಾವುದೇ ಪ್ರಮಾಣೀಕೃತ ಔಷಧ ಅಥವಾ ವೈಾನಿಕ ಚಿಕಿತ್ಸೆ ನೀಡದೆ ಅಂದಾಜಿನ ಮೇಲೆ ಟ್ರೀಟ್ಮೆಂಟ್​ ನೀಡುತ್ತಿರುವುದು ಹತ್ತಾರು ವಿಧಗಳಲ್ಲಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಈ ಜಾಲ ಆಳವಾಗಿ ಬೇರೂರಿದ್ದು, "ಬೆಕ್ಕಿಗೆ ಚೆಲ್ಲಾಟವಾದರೆ, ಇಲಿಗೆ ಪ್ರಾಣಸಂಕಟ' ಎನ್ನುವಂತೆ ರೋಗಿಗಳ ಪರಿಸ್ಥಿತಿ ದಯನೀಯವಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳ ಕೊರತೆ ಹಾಗೂ ಲಭ್ಯವಿರುವ ಸಿಬ್ಬಂದಿ ಸರಿಯಾಗಿ ಸ್ಪಂದಿಸದಿರುವುದು ಇಂತಹ ನಕಲಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿದೆ.
ಅರ್ಹತೆ ಇಲ್ಲದ ಇಂತಹ ವೈದ್ಯರಿಂದಾಗಿ ಅಮಾಯಕ ರೋಗಿಗಳು ಬಲಿಯಾಗುತ್ತಿದ್ದು, ಅತಿಯಾದ ಆಂಟಿಬಯಾಟಿಕ್​ ಬಳಕೆ ಹಾಗೂ ಚಿಕಿತ್ಸೆಯ ಹೆಸರಲ್ಲಿ ಸ್ಟಿರಾಯ್ಡ್​ಗಳನ್ನು ಅಸಮರ್ಪಕವಾಗಿ ನೀಡುತ್ತಿರುವುದು ರೋಗಿಗಳಿಗೆ ಮಾರಕವಾಗುತ್ತಿದೆ.
ನಕಲಿಗಳ ತಡೆಗೆ ಸರ್ಕಾರ ಈ ಹಿಂದೆ ಕರ್ನಾಟಕ ಖಾಸಗಿ ವೈದ್ಯಕಿಯ ಸಂಸ್ಥೆಗಳ ಕಾಯ್ದೆ (ಕೆಪಿಎಂಎ) ಜಾರಿಗೊಳಿಸಿ ಜಿಲ್ಲಾವಾರು ಸಮಿತಿಗಳನ್ನು ರಚಿಸಿತ್ತಾದರೂ, ನಿರೀತ ಮಟ್ಟದಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಹೊಣೆ ಹೊತ್ತಿರುವ ಹರ್ಷಗುಪ್ತಾ ಅವರು ಗುಪ್ತಚರ ಇಲಾಖೆಯ ಮೂಲಕ ರಾಜ್ಯದ ಎಲ್ಲ ತಾಲೂಕುಗಳಿಂದ ನಕಲಿ ವೈದ್ಯರ ರಹಸ್ಯ ಪಟ್ಟಿಯನ್ನು ತರಿಸಿಕೊಂಡಿದ್ದಾರೆ.
ಇದನ್ನು ಡಿಎಚ್​ಒಗಳಿಗೆ ನೀಡದೆ ನೇರವಾಗಿ ಜಿಲ್ಲಾಧಿಕಾರಿಗಳಿಗೆ ರವಾನಿಸಿ, ತಾಲೂಕು ಆರೋಗ್ಯಾಧಿಕಾರಿಗಳ (ಟಿಎಚ್​ಒ) ಮೂಲಕ ದಾಳಿ ನಡೆಸಿ ಕ್ಲಿನಿಕ್​ಗಳನ್ನು ಬಂದ್​ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಕ್ರಮಗಳ ಅನುಪಾಲನಾ ವರದಿಯನ್ನು ನೇರವಾಗಿ ಜಿಲ್ಲಾಧಿಕಾರಿಗಳ ಮೂಲಕವೇ ಸರ್ಕಾರಕ್ಕೆ ಸಲ್ಲಿಸಬೇಕಿರುವುದು ನಕಲಿಗಳಲ್ಲಿ ನಡುಕ ಹುಟ್ಟಿಸಿದೆ.

ರಾಜ್ಯಾದ್ಯಂತ ಬೇಟೆ, 1,456 ಮಂದಿ ಪತ್ತೆ

ಕಳೆದೆರಡು ವರ್ಷಗಳಲ್ಲಿ ಆರೋಗ್ಯ ಮತ್ತು ಆಯುಷ್​ ಇಲಾಖೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ ಒಟ್ಟು 1,456 ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದೆ. ಆರೋಗ್ಯ ಇಲಾಖೆಯು 623 ವೈದ್ಯರನ್ನು ಗುರುತಿಸಿ 163 ಜನರಿಗೆ ನೋಟಿಸ್​ ನೀಡಿದ್ದು, 193 ಆಸ್ಪತ್ರೆಗಳನ್ನು ಬಂದ್​ ಮಾಡಿಸಿ 142 ಕ್ಲಿನಿಕ್​ಗಳನ್ನು ಸೀಜ್​ ಮಾಡಿದೆ. ಈ ಪೈಕಿ 89 ಜನರಿಗೆ ದಂಡ ವಿಧಿಸಲಾಗಿದ್ದು, 36 ಮಂದಿಯ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಆಯುಷ್​ ಇಲಾಖೆಯಿಂದ 833 ನಕಲಿಗಳನ್ನು ಪತ್ತೆ ಮಾಡಲಾಗಿದ್ದು, ಹಲವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಬಿರುಸಿನ ಕಾರ್ಯಾಚರಣೆ

ಕೊಪ್ಪಳ ಜಿಲ್ಲೆಯಲ್ಲೂ ನಕಲಿಗಳ ವಿರುದ್ಧದ ಬೇಟೆ ಅತ್ಯಂತ ಬಿರುಸಿನಿಂದ ಸಾಗಿದೆ. ಕಳೆದ ಫೆಬ್ರವರಿಯಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರ ಭೇಟಿ ವೇಳೆ ಜಿಲ್ಲೆಯಲ್ಲಿ 65 ನಕಲಿ ವೈದ್ಯರನ್ನು ಪತ್ತೆ ಮಾಡಲಾಗಿತ್ತು. ಇದೀಗ ಹೊಸ ಪಟ್ಟಿ ಆಧರಿಸಿ ಜಿಲ್ಲೆಯಲ್ಲಿ ಈವರೆಗೆ 35 ಕ್ಲಿನಿಕ್​ಗಳನ್ನು ಬಂದ್​ ಮಾಡಿಸಲಾಗಿದೆ. ಕೊಪ್ಪಳ ತಾಲೂಕಿನಲ್ಲಿ 13 ಆಸ್ಪತ್ರೆಗಳು ಬಂದ್​ ಆಗಿದ್ದರೆ, ಯಲಬುರ್ಗಾ ತಾಲೂಕಿನಲ್ಲಿ ಆರು ಬಂದ್​ ಆಗಿವೆ. ಇಲ್ಲಿ ಐವರು ವೈದ್ಯರು ತಲೆಮರೆಸಿಕೊಂಡಿದ್ದು, ಉಳಿದ 11 ಜನರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಕುಷ್ಟಗಿ ತಾಲೂಕಿನಲ್ಲಿ ಆರು ಬಂದ್​ ಆಗಿ ಒಂಬತ್ತು ಬಾಕಿ ಇವೆ ಹಾಗೂ ಗಂಗಾವತಿ ತಾಲೂಕಿನಲ್ಲಿ ಐದು ಆಸ್ಪತ್ರೆಗಳನ್ನು ಬಂದ್​ ಮಾಡಿಸಲಾಗಿದ್ದು, ಇನ್ನೂ 22 ನಕಲಿ ಕೇಂದ್ರಗಳು ಪಟ್ಟಿಯಲ್ಲಿ ಬಾಕಿ ಉಳಿದಿವೆ.
"

ನಕಲಿ ವೈದ್ಯರ ಪಟ್ಟಿ ಬಂದಿದೆ. ಆಯಾ ಟಿಎಚ್​ಒಗಳಿಗೆ ಕಳುಹಿಸಿ ತಣ ಕ್ರಮಕ್ಕೆ ಸೂಚಿಸಿರುವೆ. ಈವರೆಗೆ ಕೈಗೊಂಡ ಕ್ರಮದ ಬಗ್ಗೆ ಸಭೆ ನಡೆಸಿ ವಿವರ ಪಡೆಯಲಾಗುವುದು. ಬಳಿಕ ಮುಂದಿನ ನಿರ್ಧಾರ ತೆಗೆದುಕೊಂಡು ಸರ್ಕಾರಕ್ಕೆ ವರದಿ ಮಾಡುವೆ.

— ಡಾ.ಸುರೇಶ ಬಿ.ಇಟ್ನಾಳ, ಕೊಪ್ಪಳ ಜಿಲ್ಲಾಧಿಕಾರಿ.

"

ನಕಲಿ ವೈದ್ಯರ ಪಟ್ಟಿ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಬಂದಿದೆ. ಟಿಎಚ್​ಒಗಳ ಮೂಲಕ ಕ್ರಮಕ್ಕೆ ಸೂಚಿಸಿದ್ದಾರೆ. ಹಿಂದೆ ಉಪ ಲೋಕಾಯುಕ್ತರು ಬಂದಾಗ 65 ಬಂದ್​ ಮಾಡಿಸಿದ್ದೆವು. ಈಗ 35ಕ್ಕೂ ಹೆಚ್ಚು ಕ್ಲೋಸ್​ ಮಾಡಿಸಲಾಗಿದೆ. >

— ಡಾ.ಟಿ.ಲಿಂಗರಾಜು, ಡಿಎಚ್​ಒ ಕೊಪ್ಪಳ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net