ಶ್ರೀ ಅಡವಿ ಮುಖ್ಯ ಪ್ರಾಣೇಶ ತೇರು ಜೋರು

ಕುಷ್ಟಗಿ ಪಟ್ಟಣದ ಶ್ರೀ ಅಡವಿ ಮುಖ್ಯ ಪ್ರಾಣೇಶ ದೇವರ ಮಹಾ ರಥೋತ್ಸವ ಶುಕ್ರವಾರ ಸಂಜೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಕುಷ್ಟಗಿ ಪಟ್ಟಣದ ಶ್ರೀ ಅಡವಿ ಮುಖ್ಯ ಪ್ರಾಣೇಶ ದೇವರ ಮಹಾ ರಥೋತ್ಸವ ಶುಕ್ರವಾರ ಸಂಜೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
Published on
ಕುಷ್ಟಗಿ: ಪಟ್ಟಣದ ಶಾಖಾಪೂರ ರಸ್ತೆಯ ಶ್ರೀ ಅಡವಿಮುಖ್ಯ ಪ್ರಾಣೇಶ ಜಾತ್ರೆ ನಿಮಿತ್ತ ಮಹಾರಥೋತ್ಸವ ಶುಕ್ರವಾರ ಸಂಜೆ ಅದ್ದೂರಿಯಾಗಿ ಜರುಗಿತು.
ಬೆಳಗ್ಗೆ ಶ್ರೀಸ್ವಾಮಿಗೆ ವಿಶೇಷ, ಅಭಿಷೇಕ, ಪಂಚಾಮೃತ ಅಭಿಷೇಕ, ವ್ಯಾಸಪೂಜೆ ನಂತರ ರಥಾಂಗ ಹಾಗೂ ಪವಮಾನ ಹೋಮ ನೆರವೇರಿಸಲಾಯಿತು. ಸಂಜೆ ಶ್ರೀ ಸತ್ಯನಾರಾಯಣ ಪೂಜೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದೆವು.
ಬಳಿಕ ಜರುಗಿದ ರಥೋತ್ಸವಕ್ಕೆ ಭಕ್ತರು ಉತ್ತತ್ತಿ ಸಮರ್ಪಿಸಿದರು. ಸುತ್ತಲಿನ ಗ್ರಾಮಗಳಾದ ಶಾಖಾಪೂರ, ವಣಗೇರಿ, ಕಂದಕೂರು, ನೆರಬೆಂಚಿ, ಗುಮಗೇರಾ, ಹಿರೇಮನ್ನಾಪೂರ, ತಳುವಗೇರಾ, ದೋಟಿಹಾಳ, ಬಿಜಕಲ್, ಕೊರಡಕೇರಾ, ಹಿರೇ ನಂದಿಹಾಳ, ಬ್ಯಾಲಿಹಾಳ, ಮದಲಗಟ್ಟಿ ಸೇರಿದಂತೆ ಇತರ ಗ್ರಾಮಗಳಿಂದ ಭಕ್ತರು ಆಗಮಿಸಿ ಪ್ರಾಣೇಶ ದೇವರ ದರ್ಶನ ಪಡೆದರು. ಸ್ವಾಮೀಜಿಗಳು, ಮುಖಂಡರು, ಗಣ್ಯರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net