ಹಾಲವರ್ತಿಯಲ್ಲಿ ಕಾರ್ಖಾನೆ ಬಾಧಿತ ರೈತ ಸಂಘ ರಚನೆ

ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಗುರುವಾರ ಕಾರ್ಖಾನೆ ಬಾಧಿತ ರೈತರ ಸಂ ರಚಿಸಲಾಯಿತು. ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ರಾಜು ಬಾಕಳೆ, ಸರೋಜಾ ಬಾಕಳೆ ಹಾಗೂ ಸಂದ ಪದಾಧಿಕಾರಿಗಳಿದ್ದರು.
ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಗುರುವಾರ ಕಾರ್ಖಾನೆ ಬಾಧಿತ ರೈತರ ಸಂ ರಚಿಸಲಾಯಿತು. ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳ, ರಾಜು ಬಾಕಳೆ, ಸರೋಜಾ ಬಾಕಳೆ ಹಾಗೂ ಸಂದ ಪದಾಧಿಕಾರಿಗಳಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೈಗಾರಿಕೆಗಳ ವಿರುದ್ಧ ಹೋರಾಟಕ್ಕೆ ಕರೆ
ಕೊಪ್ಪಳ: ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಗುರುವಾರ ಕಾರ್ಖಾನೆ ಬಾಧಿತ ರೈತರ ಸಂ ರಚಿಸಲಾಯಿತು. ಹಸಿರು ಶಾಲು ದೀಕ್ಷೆ, ಬೋರ್ಡ್​ ಅನಾವರಣ, ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮಾಣ ವಚನ ಬೋಧನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕೈಗಾರಿಕೆಗಳ ವಿರುದ್ಧ ಹೋರಾಟ 154 ದಿನ ಪೂರೈಸಿದ್ದು ಕಾರ್ಖಾನೆ ಬಾಧಿತ ಗ್ರಾಮಗಳಲ್ಲಿ ರೈತ ಸಂ ರಚಿಸಲಾಗುತ್ತಿದೆ. ಹೆದರದೇ ಜೀವಿಸಿ. ಪಟ್ಟಭದ್ರರನ್ನು ಎದುರಿಸುವ ಶಕ್ತಿ ಮೈಗೂಡಿಸಿಕೊಂಡು ಸಾಗಿರಿ. ಜಂಟಿ ಕ್ರಿಯಾ ವೇದಿಕೆ ಸದಾ ನಿಮ್ಮ ಜೊತೆಗೆ ನಿಲ್ಲುತ್ತದೆ. ಕಂಪನಿಗಳ ಗೂಂಡಾಗಿರಿ, ದಬ್ಬಾಳಿಕೆ, ಕಪಟತನ ಇನ್ನು ನಡೆಯದು. ರೈತರು ಜಾತಿ, ಮತ, ಧರ್ಮ ಮೀರಿ ಒಂದಾಗಿ ಎಂದು ಕರೆ ನೀಡಿದರು.
ವಕೀಲ ರಾಜು ಬಾಕಳೆ, ಸಂಚಾಲಕರಾದ ಮಲ್ಲಿಕಾರ್ಜುನ ಗೋನಾಳ, ಮಂಜುನಾಥ ಗೊಂಡಬಾಳ ಮಾತನಾಡಿದರು.
ಗವಿಸಿದ್ದ ರಡ್ಡಿ (ಗೌರವ ಅಧ್ಯಕ್ಷ), ಮಾರ್ಕಂಡೇಯ ಹಿರೇಮಠ (ಅಧ್ಯಕ್ಷ), ಪರಮೇಶ ಕುರಗಡ್ಡಿ (ಉಪಾಧ್ಯಕ್ಷ), ಮಂಜುನಾಥ ಕೆಂಚನಗೌಡರ (ಪ್ರ.ಕಾ.), ಬಸವರಾಜ ಮೈನಳ್ಳಿ (ಸ.ಕಾ.), ಎಂ.ಹನುಮಂತ, ಶಿವು ಕೌದಿ (ಸಂಟನಾ ಕಾರ್ಯದರ್ಶಿ), ನಾಗರಾಜ ಕಟ್ಟಿಮನಿ (ಖಜಾಂಚಿ), ಹನುಮಪ್ಪ ಹೊಸಮನಿ, ಮುತ್ತು ಮಾಲಿಗೌಡ್ರ, ಗವಿಸಿದ್ದಪ್ಪ ಗೊರವರ, ಸುರೇಶ ಕಿನ್ನಾಳ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.
ಪ್ರಮುಖರಾದ ಸರೋಜಾ ಬಾಕಳೆ, ಜ್ಯೋತಿ ಗೊಂಡಬಾಳ, ಬಸಾಪುರ ಮೂಕಪ್ಪ ಮೇಸ್ತ್ರಿ, ಯಮನೂರಪ್ಪ ಹಾಲಳ್ಳಿ, ಹನುಮಪ್ಪ ತಳವಾರ, ಸಣ್ಣಹನುಮಪ್ಪ ಗಿಣಿಗೇರಿ, ಮಂಗಳೇಶ ರಾಠೋಡ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net