ವಚನಗಳಲ್ಲಿ ನೇರ ವಿಚಾರಗಳ ವಿವರಣೆ

ಕಾರಟಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಸದಸ್ಯ ಹಿರೇಬಸಪ್ಪ ಸಜ್ಜನ್, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ನಿವೃತ್ತ ಪಿಎಸ್‌ಐ ಕೆ.ಮಲ್ಲಪ್ಪ ಇತರರಿದ್ದರು.
ಕಾರಟಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಸದಸ್ಯ ಹಿರೇಬಸಪ್ಪ ಸಜ್ಜನ್, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ನಿವೃತ್ತ ಪಿಎಸ್‌ಐ ಕೆ.ಮಲ್ಲಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೇರ ವಿಚಾರ
  • ವಿವರಣೆ

ವಚನಗಳಲ್ಲಿ ನೇರ ವಿಚಾರಗಳ ವಿವರಣೆ

ಕಾರಟಗಿ: ವಚನ ಚಳುವಳಿಯಲ್ಲಿ ಅಂಬಿಗರ ಚೌಡಯ್ಯ ಅವರು ನಿಜ ಶರಣರೆಂದೇ ಹೆಸರುವಾಸಿಯಾಗಿದ್ದರು ಎಂದು ಜಿಪಂ ಮಾಜಿ ಸದಸ್ಯ ವೀರೇಶ ಸಾಲೋಣಿ ಹೇಳಿದರು.

ನಗರದಲ್ಲಿ ತಾಲೂಕು ಗಂಗಾಮತ ಸಮಾಜ, ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚೌಡಯ್ಯ ಅವರ ವಚನಗಳಲ್ಲಿ ನೇರ, ದಿಟ್ಟ ವಿಚಾರಗಳು ತುಂಬಿವೆ. ಕಂದಾಚಾರಗಳನ್ನು ನಿಷ್ಠೂರವಾಗಿ ಖಂಡಿಸುತ್ತಲೇ ಮಾನವೀಯತೆ, ಸತ್ಯ, ಸಮಾನತೆಯ ಪ್ರತಿಪಾದಿಸಿ ಸರ್ವರಲ್ಲೂ ಸಮಾನತೆಯ ತತ್ವ ಸಾರಿದರು.
ಪುರಸಭೆ ಅಧ್ಯಕ್ಷ ಮಂಜುನಾಥ ಮೇಗೂರು, ಸದಸ್ಯ ಹಿರೇಬಸಪ್ಪ ಸಜ್ಜನ್, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ನಾಮನಿರ್ದೇಶಿತ ಸದಸ್ಯರಾದ ಸಿದ್ದಪ್ಪ ಬೇವಿನಾಳ, ವೀರೇಶ ಮುದಗಲ್, ಸೋಮಶೇಖರಪ್ಪ, ಗಂಗಾಮತ ಸಮಾಜದ ತಾಲೂಕಾಧ್ಯಕ್ಷ ಅಯ್ಯಪ್ಪ ಸಂಗಟಿ, ನಿವೃತ್ತ ಪಿಎಸ್‌ಐ ಕೆ.ಮಲ್ಲಪ್ಪ, ಪ್ರಮುಖರಾದ ಶಿವರೆಡ್ಡಿ ನಾಯಕ, ನಾಗರಾಜ್ ಬಿಲ್ಗಾರ್, ಶಶಾಂಕ ತಂಗಡಗಿ, ಮೌನೇಶ ದಢೇಸೂಗೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net