ಕೊಪ್ಪಳ ಬಂದ್‌ಗೆ ಗವಿಶ್ರೀಗಳ ಮಾರ್ಗದರ್ಶನ ಪಡೆಯಲು ಹೋರಾಟ ಸಮಿತಿಯ ತಂಡ ಶ್ರೀಮಠಕ್ಕೆ ಭೇಟಿ ನೀಡಿತು. ಡಿ.ವೈ.ಎ್.ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹಿರಿಯ ನ್ಯಾಯವಾದಿ ವಿ.ಎಂ. ಭೂಸನೂರಮಠ, ಪೀರಾ ಹುಸೇನ ಹೊಸಳ್ಳಿ, ಡಿ.ಎಚ್. ಪೂಜಾರ, ಗುರುರಾಜ ದೇಸಾಯಿ ಇತರರಿದ್ದರು.
ಕೊಪ್ಪಳ: ಜಿಲ್ಲೆಯಲ್ಲಿ ತೀವ್ರ ಸ್ವರೂಪ ಪಡೆದಿರುವ ಬಲ್ಡೋಟ ಹಟಾವೋ, ಕೊಪ್ಪಳ ಬಚಾವೋ ಚಳವಳಿಯ ಭಾಗವಾಗಿ ಫೆ.24ರಂದು ಹಮ್ಮಿಕೊಳ್ಳಲಾಗಿರುವ ಕೊಪ್ಪಳ ಬಂದ್ ಹೋರಾಟಕ್ಕೆ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನ ಪಡೆಯಲು ಹೋರಾಟ ಸಮಿತಿಯ ತಂಡ ಭಾನುವಾರ ಶ್ರೀಮಠಕ್ಕೆ ಭೇಟಿ ನೀಡಿತು.
ಡಿ.ವೈ.ಎ್.ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಧರಣಿಯ 108ನೇ ದಿನದ ಅಂಗವಾಗಿ ಪ್ರತಿಭಟನೆಯನ್ನು ಬೆಂಬಲಿಸಿ. ಜಿಲ್ಲೆಯಲ್ಲಿ ಉದ್ಯೋಗದ ಹೆಸರಿನಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಲ್ಲಿ ಜೀವಗಳೇ ಹಾರಿ ಹೋಗುತ್ತಿರುವಾಗ ಕೇವಲ ಉದ್ಯೋಗದ ಬಗ್ಗೆ ಮಾತನಾಡುವುದು ಸರಿಯಲ್ಲ.
ಕಾರ್ಖಾನೆಗಳು ಸ್ಥಳೀಯರಿಗೆ ಉದ್ಯೋಗ ನೀಡುವ ಬದಲಿಗೆ ಉತ್ತರ ಭಾರತದ ರಾಜ್ಯಗಳಿಂದ ಚ್ೀ ಲೇಬರ್‌ಗಳನ್ನು ತಂದು ಅವರ ಆರೋಗ್ಯವನ್ನೂ ಹಾಳು ಮಾಡುತ್ತಿವೆ. ಇಲ್ಲಿನ ಪ್ರತಿಯೊಬ್ಬ ನಾಗರಿಕನೂ ಈ ವ್ಯವಸ್ಥೆಯಲ್ಲಿ ಬಲಿಪಶುವಾಗುತ್ತಿದ್ದಾನೆ. ಫೆ.24ರ ಬಂದ್‌ಗೆ ನಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ ಎಂದರು.
ಧರಣಿಯ ನೇತೃತ್ವ ವಹಿಸಿದ್ದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನಗರದ ನಾಗರಿಕರು ಸ್ವಯಂಪ್ರೇರಿತರಾಗಿ ಫೆ.24ರ ಬಂದ್‌ಯಶಸ್ವಿಗೊಳಿಸಬೇಕು ಎಂದರು.
ಸಾತ್ವಿಕ ಹೋರಾಟಕ್ಕೆ ಶ್ರೀಗಳ ಕರೆ
ಹೋರಾಟ ಸಮಿತಿಯ ತಂಡವು ಶ್ರೀ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಈಗ ನಡೆಯುತ್ತಿರುವ ಹೋರಾಟ ಸಾತ್ವಿಕವಾಗಿ ಸಾಗುತ್ತಿದೆ. ನಾನು ಸುಮ್ಮನೆ ಕುಳಿತಿಲ್ಲ. ನನ್ನ ಹಂತದಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಭರವಸೆ ನೀಡಿದರು.
ಹಿರಿಯ ವಕೀಲ ಎಂ.ವಿ.ಭೂಸನೂರುಮಠ ಅವರಿಗೆ ಹೋರಾಟದ ಮುಂಚೂಣಿಯಲ್ಲಿ ನಿಂತು ಮುನ್ನಡೆಸಲು ಸೂಚಿಸಿದ ಶ್ರೀಗಳು, ಮಠ ನಿಮ್ಮದೇ, ಚಳವಳಿಯಲ್ಲಿ ಪಾಲ್ಗೊಳ್ಳುವವರಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ನೀವೇ ಮಾಡಿಕೊಳ್ಳಿ ಎಂದು ಪ್ರೀತಿಯಿಂದ ಮಾರ್ಗದರ್ಶನ ಮಾಡಿದರು.
ಪ್ರಮುಖರಾದ ಕಾವ್ಯಾ ಪ್ರಸನ್ನ ಗಡಾದ, ಸರೋಜಾ ಬಾಕಳೆ, ಸೌಮ್ಯಾ ನಾಲವಾಡ, ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ ಇತರರಿದ್ದರು.