ಅಭಿಯಾನದ ಯಶಸ್ವಿಗೆ ಎಲ್ಲರೂ ಸಹಕರಿಸಿ

ಕೇಸರಹಟ್ಟಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅಭಿಯಾನ (ಎಸ್‌ಐಆರ್) ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಆರಾಧನೆ ಸಮಿತಿ ಸದಸ್ಯ ವಿಶ್ವನಾಥ ಮಾ.ಪಾಟೀಲ್, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್ ಹಳ್ಳಿ, ಪಿಎಸ್ಸೆಸ್ಸೆನ್ ಉಪಾಧ್ಯಕ್ಷ ಎಂ.ವಿಶ್ವನಾಥ, ಬಿಎಲ್‌ಒ  ಬಸವಂತಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮತದಾರರ
  • ನೆರವು
  • ಕೇಂದ್ರ
ಗಂಗಾವತಿ: ತಾಲೂಕಿನ ಕೇಸರಹಟ್ಟಿಯ ಒಂದನೇ ವಾರ್ಡ್‌ನಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅಭಿಯಾನ (ಎಸ್‌ಐಆರ್) ಬಗ್ಗೆ ಜನರಲ್ಲಿ ಬುಧವಾರ ಜಾಗೃತಿ ಮೂಡಿಸಲಾಯಿತು.
ತಾಪಂ ಮತ್ತು ಗ್ರಾಪಂ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು, ಮತದಾರರ ನೆರವು ಕೇಂದ್ರದ ಬಗ್ಗೆ ಮಾಹಿತಿ ನೀಡಲಾಯಿತು. ಮನೆಮನೆಗೆ ತೆರಳಿದ ಗ್ರಾಪಂ ಸಿಬ್ಬಂದಿ ಮತ್ತು ಜನಪ್ರತಿನಿಧಿಗಳು ಮತದಾರರ ಪರಿಷ್ಕರಣೆಯ ಅಗತ್ಯತೆ ಕುರಿತು ಮಾತನಾಡಿದರು.
ಆರಾಧನೆ ಸಮಿತಿ ಸದಸ್ಯ ವಿಶ್ವನಾಥ ಮಾ.ಪಾಟೀಲ್ ಮಾತನಾಡಿ, ಪ್ರತಿಯೊಬ್ಬರೂ ಪರಿಷ್ಕರಣೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕಿದ್ದು, ಬಿಎಲ್‌ಒಗಳಿಗೆ ಅಗತ್ಯ ಮಾಹಿತಿ ನೀಡಬೇಕು. ಅಭಿಯಾನದ ಯಶಸ್ವಿಗೆ ಪ್ರತಿಯೊಬ್ಬರೂ ಕೈ ಜೋಡಿಸುವಂತೆ ಮನವಿ ಮಾಡಿದರು.
ಬಿಎಲ್‌ಎ 2 ವೀರನಗೌಡ, ಗ್ರಾಪಂ ಸಿಬ್ಬಂದಿ ಈರಣ್ಣ, ಪುಷ್ಪಾವತಿ, ಸುಭಾನ್ ಸಾಬ್, ಶರಣಪ್ಪ, ಸೊನ್ನದ್‌ಸಾಬ್, ಪ್ರಮುಖರಾದ ಸಿದ್ದನಗೌಡ ಮಾ. ಪಾಟೀಲ್, ಶೇಖರಪ್ಪ ಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net